ಜೋಕಟ್ಟೆಯಲ್ಲಿ ಉಚಿತ ವೈದ್ಯಕೀಯ, ದಂತ ಚಿಕಿತ್ಸಾ ಶಿಬಿರ
ಮಂಗಳೂರು, ಫೆ. 10: ಡೀಮ್ಡ್ ವಿಶ್ವವಿದ್ಯಾನಿಲಯದ ಯೆನೆಪೊಯ ಮೆಡಿಕಲ್ ಮತ್ತು ದಂತ ಆಸ್ಪತ್ರೆಯ ವತಿಯಿಂದ ಎನ್‌ಎನ್‌ಎಸ್ ಯೋಜನೆಯಡಿ ಜೋಕಟ್ಟೆಯ ಅಂಜುಮಾನ್ ಖುವ್ವತುಲ್ ಇಸ್ಲಾಂ ಅಧೀನ ಸಂಸ್ಥೆಯಾದ ಅಂಜುಮಾನ್ ಯತೀಂ ಮತ್ತು ಮಸಾಕೀನ್ ಕೇಂದ್ರವನ್ನು ಆಯ್ಕೆ ಮಾಡಿ ಉಚಿತ ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ಕಾರ್ಯಕ್ರಮವು ಯತೀಂಖಾನ ಸಭಾಂಗಣದಲ್ಲಿ ನಡೆಯಿತು.
ಜೋಕಟ್ಟೆ ಹೊಸ ಮಸೀದಿಯ ಖತೀಬ್ ಇ.ಎಂ.ಅಬ್ದುರ್ರಹ್ಮಾನ್ ದಾರಿಮಿ ಅಲ್ ಹಾದಿಮಿ ಅವರು ದುವಾದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯೆನೆಪೊಯ ವಿವಿಯ ಕುಲಪತಿ ಡಾ. ಜಿ. ಶ್ರೀಕುಮಾರ್ ಮೆನನ್ ಅಧ್ಯಕ್ಷತೆ ವಹಿಸಿದ್ದರು. ಯೆನೆಪೊಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಚ್.ಶ್ರೀಪತಿರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉಪಪ್ರಾಂಶುಪಾಲ ಡಾ.ಶಾಮ್ ಎಸ್.ಭಟ್, ಎನ್‌ಎಸ್‌ಎಸ್ ಕಾರ್ಯಕ್ರಮದ ಅಧಿಕಾರಿ ಡಾ.ಇಮ್ರಾನ್ ಪಾಶ ಎಂ., ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಹಾಜಿ ಬಿ.ಎ.ರಶೀದ್ ಮಾತನಾಡಿದರು.
ಜೋಕಟ್ಟೆ ಹಳೆ ಜುಮಾ ಮಸೀದಿಯ ಅಧ್ಯಕ್ಷ ಒ.ಎಂ.ಅಬ್ದುಲ್ ಖಾದರ್, ಯತೀಂ ಖಾನಾದ ಸಂಚಾಲಕ ಅಬ್ದುಲ್ ಖಾದರ್ ಗೋವ, ಪ್ರಧಾನ ಕಾರ್ಯದರ್ಶಿ ಮೊಯ್ದಿನ್ ಶರೀಫ್ ಉಪಸ್ಥಿತರಿದ್ದರು. ಅಂಜುಮಾನ್ ವಿದ್ಯಾ ಸಂಸ್ಥೆಯ ಸಲಹೆಗಾರ ಹಾಜಿ ಮೂಸಬ್ಬ ಪಿ.ಬ್ಯಾರಿ ಸ್ವಾಗತಿಸಿದರು. ಪ್ರೊ.ಡಾ.ರೇಖಾ ಶೆಣೈ ವಂದಿಸಿದರು. ಯತೀಂ ಖಾನದ ಉಸ್ತಾದ್ ಎಂ.ಎಸ್.ಅನ್ಸಾರ್ ಮೌಲವಿ ಕಾರ್ಯಕ್ರಮ ನಿರೂಪಿಸಿದರು.







