Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಇನ್ನು ಮುಂದೆ ವಾಟ್ಸ್ಯಾಪ್ ಮೂಲಕವೇ ನಿಮ್ಮ...

ಇನ್ನು ಮುಂದೆ ವಾಟ್ಸ್ಯಾಪ್ ಮೂಲಕವೇ ನಿಮ್ಮ ಗೆಳೆಯರಿಗೆ ಹಣ ಕಳುಹಿಸಿ, ಹಣ ಸ್ವೀಕರಿಸಿ

‘ವಾಟ್ಸ್ಯಾಪ್ ಪೇಮೆಂಟ್’ ಬಗ್ಗೆ ಮಾಹಿತಿ ಇಲ್ಲಿದೆ

ವಾರ್ತಾಭಾರತಿವಾರ್ತಾಭಾರತಿ10 Feb 2018 11:08 PM IST
share
ಇನ್ನು ಮುಂದೆ ವಾಟ್ಸ್ಯಾಪ್ ಮೂಲಕವೇ ನಿಮ್ಮ ಗೆಳೆಯರಿಗೆ ಹಣ ಕಳುಹಿಸಿ, ಹಣ ಸ್ವೀಕರಿಸಿ

ಇತರ ವಾಟ್ಸ್ಯಾಪ್ ಬಳಕೆದಾರರಿಗೆ ಹಣ ವರ್ಗಾವಣೆ ಮಾಡುವ ಹೊಸ ಫೀಚರೊಂದನ್ನು ಭಾರತದಲ್ಲಿ ಪರೀಕ್ಷಿಸಲು ವಾಟ್ಸ್ಯಾಪ್ ಆರಂಭಿಸಿದೆ. ಇದೀಗ ಈ ಫೀಚರ್ ಪ್ರಾಯೋಗಿಕ ಹಂತದಲ್ಲಿದೆ. ಆದರೆ ಎಲ್ಲಾ ಕಡೆಗಳಲ್ಲೂ ಈ ಫೀಚರ್ ಲಭ್ಯವಿರದೇ ಇರುವುದರಿಂದ ಅಧಿಕೃತವಾಗಿ ಘೋಷಿಸಿಲ್ಲ ಎನ್ನಲಾಗುತ್ತಿದೆ.

ಸ್ಟೇಟ್  ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಹಾಗು ಆ್ಯಕ್ಸಿಸ್ ಬ್ಯಾಂಕ್ ಗಳು ವಾಟ್ಸ್ಯಾಪ್ ನ ಈ ಹೊಸ ಫೀಚರ್ ಗೆ ಕೆಲ ಸಮಯದವರೆಗೆ ನೆರವಾಗಲಿದೆ.

ಈ ಫೀಚರ್ ಗೆ ಸಂಬಂಧಿಸಿದ ಕೆಲ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಾಟ್ಸ್ಯಾಪ್ ನ ಸೆಟ್ಟಿಂಗ್ ಆಪ್ಶನ್ ನಲ್ಲಿ ಪೇಮೆಂಟ್ ಫೀಚರ್ ಲಭ್ಯವಿದೆ.  ಐಒಎಸ್ ಹಾಗು ಆ್ಯಂಡ್ರಾಯ್ಡ್ ಗಳಲ್ಲಿ ಈ ಫೀಚರ್ ಕೆಲಸ ಮಾಡಲಿದೆ ಎನ್ನಲಾಗಿದೆ.

ಈ ಆಪ್ಶನನ್ನು ಎಲ್ಲಾ ಬಳಕೆದಾರರೂ ನೋಡಲು ಸಾಧ್ಯವಿಲ್ಲ. ಪೇಮೆಂಟ್ ಫೀಚರ್ ಇರುವ ಬಳಕೆದಾರರು ಸಂದೇಶಗಳನ್ನು ಕಳುಹಿಸಿದ ನಂತರ ನಿಮ್ಮ ಮೊಬೈಲ್ ನಲ್ಲೂ ಪೇಮೆಂಟ್ ಫೀಚರ್ ಲಭ್ಯವಾಗುತ್ತದೆ. ಸಂದೇಶ ಸಿಕ್ಕ ನಂತರ ವಾಟ್ಸ್ಯಾಪನ್ನು ರಿಲಾಂಚ್ ಮಾಡಿದರೆ ವಾಟ್ಸ್ಯಾಪ್ ಸೆಟ್ಟಿಂಗ್ ನಲ್ಲಿ ಪೇಮೆಂಟ್ ಫೀಚರ್ ಲಭ್ಯವಾಗಲಿದೆ.

ವಾಟ್ಸ್ಯಾಪ್ ಪೇಮೆಂಟ್ ಗೆ ಯುಪಿಐ ( Unified Payments Interface ) ಅವಶ್ಯಕವಾಗಿದೆ. ವಾಟ್ಸ್ಯಾಪ್ ನಲ್ಲಿ ಯುಪಿಐ ಆ್ಯಕ್ಟಿವೇಟ್ ಮಾಡುವ ವಿಧಾನ  ಇಲ್ಲಿದೆ.

ವಾಟ್ಸ್ಯಾಪ್ ಸೆಟ್ಟಿಂಗ್ಸ್ ನಲ್ಲಿ ಪೇಮೆಂಟ್ಸ್ ಗೆ ಕ್ಲಿಕ್ ಮಾಡಬೇಕು. ಇಲ್ಲಿ ಬ್ಯಾಂಕ್ ಖಾತೆಯನ್ನು ನಮೂದಿಸುವ ಆಯ್ಕೆ ಇರುತ್ತದೆ. ‘ಆ್ಯಡ್ ನ್ಯೂ ಬ್ಯಾಂಕ್ ಅಕೌಂಟ್’ಗೆ ಟ್ಯಾಪ್ ಮಾಡಿದ ತಕ್ಷಣ ಶರತ್ತು ಹಾಗು ನಿಯಮಗಳನ್ನು ಒಪ್ಪಬೇಕಾಗುತ್ತದೆ. ಆನಂತರ ನಮ್ಮ ನಂಬರನ್ನು ವೆರಿಫೈ ಮಾಡಬೇಕು.

ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆದ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಯುಪಿಐ ಕೆಲಸ ಮಾಡಲಿದೆ. ಆದ್ದರಿಂದ ನಾವು ಬಳಸುತ್ತಿರುವ ವಾಟ್ಸ್ಯಾಪ್ ಸಂಖ್ಯೆ ಹಾಗು ಬ್ಯಾಂಕ್ ಗೆ ನೀಡಿರುವ ಮೊಬೈಲ್ ಸಂಖ್ಯೆ ಒಂದೇ ಆಗಿರಬೇಕು. ಒಮ್ಮೆ ಮೊಬೈಲ್ ಸಂಖ್ಯೆ ವೆರಿಫೈ ಆದರೆ ಬ್ಯಾಂಕ್ ಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ಬ್ಯಾಂಕನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಬಯಸಿದ ಖಾತೆಯನ್ನು ವಾಟ್ಸ್ಯಾಪ್ ಪೇಮೆಂಟ್ ನೊಂದಿಗೆ ಲಿಂಕ್ ಮಾಡಬೇಕು.  

ವಿರ್ಚ್ಯುವಲ್ ಪೇಯಿ ಅಡ್ರಸ್ ಗಾಗಿ ಬಳಕೆದಾರರು ಡೆಬಿಟ್ ಕಾರ್ಡ್ ನ ಕೊನೆಯ 6 ಸಂಖ್ಯೆಗಳನ್ನು ನಮೂದಿಸಬೇಕು.  ಯಾರಿಗೆ ಹಣ ಕಳುಹಿಸಬೇಕೋ ಅವರೊಂದಿಗೆ ಚಾಟ್ ಮಾಡುತ್ತಾ ಅಥವಾ ಗ್ರೂಪ್ ಚಾಟ್ ಮಾಡುತ್ತಾ ಹಣ ಕಳುಹಿಸಬಹುದು. + ಚಿಹ್ನೆಗೆ ಕ್ಲಿಕ್ ಮಾಡಿ ಪೇಮೆಂಟ್ ನ್ನು ಆಯ್ಕೆ ಮಾಡಬೇಕು. ನೀವು ಯಾರಿಗೆ ಹಣ ಕಳುಹಿಸಲು ಉದ್ದೇಶಿಸಿದ್ದೀರೋ ಅವರಲ್ಲೂ ಪೇಮೆಂಟ್ ಫೀಚರ್ ಇರಬೇಕು. ಪೇಮೆಂಟನ್ನು ಅವರು ಕೂಡ ನಿಮ್ಮಂತೆಯೇ ಆ್ಯಕ್ಟಿವೇಟ್ ಮಾಡಿರಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X