Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಪತ್ರಕರ್ತರ ಪ್ರಶ್ನೆಗಳಿಗೂ ಇವಿಎಂ...

ಪತ್ರಕರ್ತರ ಪ್ರಶ್ನೆಗಳಿಗೂ ಇವಿಎಂ ಮೆಷಿನ್!

-ಚೇಳಯ್ಯ chelayya@gmail.com-ಚೇಳಯ್ಯ chelayya@gmail.com11 Feb 2018 12:20 AM IST
share
ಪತ್ರಕರ್ತರ ಪ್ರಶ್ನೆಗಳಿಗೂ ಇವಿಎಂ ಮೆಷಿನ್!

 ಬಜೆಟ್‌ಗೆ ಸಂಬಂಧಿಸಿದಂತೆ ಪತ್ರಕರ್ತ ಎಂಜಲು ಕಾಸಿ ನರೇಂದ್ರ ಮೋದಿಯವರನ್ನು ಅತ್ಯದ್ಭುತವಾಗಿ ಸಂದರ್ಶನ ಮಾಡಿ ಬಂದಿರುವುದು ಸಂಪಾದಕರಿಗೆ ಇಷ್ಟವಾಗಿ, ‘‘ನೋಡ್ರೀ...ಚುನಾವಣೆ ಹತ್ತಿರ ಬಂದಿದೆ. ಎಲ್ಲ ಪತ್ರಿಕೆಗಳಿಗೂ ನರೇಂದ್ರ ಮೋದಿಯನ್ನು ಯಾವಾಗೆಲ್ಲ ಸಂದರ್ಶನ ಮಾಡಬೇಕು ಎನ್ನುವ ಪಟ್ಟಿ ಈಗಷ್ಟೇ ಅಂಬಾನಿ ಕಂಪೆನಿಯಿಂದ ಬಿಡುಗಡೆಯಾಗಿದೆ. ತಕ್ಷಣ ಇನ್ನೊಂದು ಇಂಟರ್ಯೂ ಮಾಡಿ ಬನ್ನಿ. ಏನೆಲ್ಲ ಪ್ರಶ್ನೆಗಳನ್ನು ಕೇಳಬೇಕು ಎನ್ನುವುದನ್ನು ಕೂಡ ಬರೆದು ಕಳುಹಿಸಲಾಗಿದೆ....ಹೋಗುವಾಗ ಅದನ್ನೂ ಹಿಡಿದುಕೊಂಡು ಹೋಗಿ.’’ ಎಂದು ಕಾಸಿಗೆ ಆದೇಶ ನೀಡಿದರು. ಪ್ರಧಾನಿ ಮೋದಿಯವರ ಸಂದರ್ಶನವೆಂದಾಕ್ಷಣ ಕಾಸಿ ಬೆಚ್ಚಿ ಬಿದ್ದ. ಒಂದೊಂದು ಉತ್ತರಗಳಿಗೂ ಕಾಸಿ ತತ್ತರಿಸಿ ಹೋಗಿರುವುದರಿಂದ ಈ ಬಾರಿ ಕೇಳುವ ಪ್ರಶ್ನೆಗೆ ಇನ್ನೇನು ಉತ್ತರ ನೀಡಬೇಕೋ ಎಂದು ಒಳಗೊಳಗೆ ಕೊರಗತೊಡಗಿದ. ಆದದ್ದಾಗಲಿ ಎಂದು ಕೊನೆಗೂ ಹೊರಟೇ ಬಿಟ್ಟ.

........

ಹದ್ದಿನ ಮುಂದೆ ಗುಬ್ಬಚ್ಚಿ ಕುಳಿತುಕೊಳ್ಳುವಂತೆ ಮೋದಿಯೆದುರು ಕುಳಿತುಕೊಂಡ ಎಂಜಲು ಕಾಸಿ ಜೋಳಿಗೆಗೆ ಕೈ ಹಾಕಿ, ಅಂಬಾನಿ ಕಳುಹಿಸಿಕೊಟ್ಟಿರುವ ಪ್ರಶ್ನೆಗಳ ಪಟ್ಟಿಗಾಗಿ ತಡಕಾಡಿದ. ಕಾಸಿ ಒಮ್ಮೆಲೆ ಬೆಚ್ಚಿ ಬಿದ್ದ. ಪ್ರಶ್ನೆಗಳ ಪಟ್ಟಿಯನ್ನು ಕಚೇರಿಯಲ್ಲೇ ಮರೆತು ಬಂದಿದ್ದ. ಎದುರುಗಡೆ ಉತ್ತರಗಳನ್ನು ಬಾಯಿ ಪಾಠ ಮಾಡಿಕೊಂಡು ಮೋದಿ ಕೂತಿದ್ದಾರೆ. ಆದರೆ ಕಾಸಿಯ ಬಳಿ ಪ್ರಶ್ನೆಗಳೇ ಇಲ್ಲ. ಏನೇ ಆಗಲಿ, ದೇಶದ ಸಮಸ್ಯೆಯ ಕುರಿತಂತೆ ಪ್ರಶ್ನೆಗಳನ್ನು ಕೇಳುವ ಎಂದು ಕಾಸಿ ನಿರ್ಧರಿಸಿದ.

‘‘ಸಾರ್...ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆಯಲ್ಲ...? ನಮ್ಮ ಸೈನಿಕರು ಒಬ್ಬೊಬ್ಬರಾಗಿ ಸಾಯುತ್ತಿದ್ದಾರೆ? ಇದಕ್ಕೆ ಕಾರಣವೇನು?’’ ಕಾಸಿ ಕೇಳಿಯೇ ಬಿಟ್ಟ.

ಮೋದಿಯವರು ತಾವು ಬಾಯಿ ಪಾಠ ಮಾಡಿದ ಉತ್ತರವನ್ನು ಒಪ್ಪಿಸತೊಡಗಿದರು ‘‘ದೇಶ ಇಂದು ವಿಶ್ವದಲ್ಲೇ ಅಧ್ಯಾತ್ಮಗುರುವಾಗಿ ಗುರುತಿಸಿಕೊಂಡಿದೆ. ಭಾರತ ಇಂದು ಅಧ್ಯಾತ್ಮವನ್ನು ವಿಶ್ವಕ್ಕೆ ರಫ್ತು ಮಾಡಿ ಭಾರೀ ವಿದೇಶಿ ವಿನಿಮಯವನ್ನು ಗಳಿಸುತ್ತಿದೆ. ಭಾರತದ ಅಧ್ಯಾತ್ಮಕ್ಕೆ ಸೋತು ಚೀನಾ ತನ್ನ ಗಡಿಯಿಂದ ಹಿಂದೆ ಸರಿದಿದೆ. ಯೋಗವನ್ನು ನಾವೀಗ...’’

ಕಾಸಿ ಅರ್ಥವಾಗದೆ ‘‘ಸಾರ್...ಕಾಶ್ಮೀರದಲ್ಲಿ ಉಗ್ರರ....’’

ಮೋದಿಯ ಮುಖ ಒಮ್ಮೆಲೆ ಕಪ್ಪಿಟ್ಟಿತ್ತು ‘‘ನೋಡ್ರೀ...ನಾನು ಉತ್ತರಗಳನ್ನು ಎಷ್ಟು ಚೆನ್ನಾಗಿ ಹೇಳುತ್ತಿದ್ದೇನೆ. ನೀವು ಪ್ರಶ್ನೆಗಳನ್ನು ಮಾತ್ರ ತಪ್ಪು ತಪ್ಪಾಗಿ ಕೇಳುತ್ತಿದ್ದೀರಿ....’’

‘‘ಸಾರ್...ಆ ಪ್ರಶ್ನೆಗಳನ್ನು ಮನೆಯಲ್ಲೇ ಮರೆತು ಬಂದಿದ್ದೇನೆ ಸಾರ್....ಆದುದರಿಂದ ದೇಶದ ಈಗಿನ ಸಮಸ್ಯೆಗಳ ಬಗ್ಗೆ ಕೇಳುತ್ತಿದ್ದೇನೆ.....ಸಾರ್ ಕಾಶ್ಮೀರ ಉಗ್ರರು....’’

ಮೋದಿ ಕಕ್ಕಾಬಿಕ್ಕಿಯಾದವರು ಒಮ್ಮೆಲೆ ಎಚ್ಚೆತ್ತು ಕೊಂಡು ‘‘ಅಲ್ಲಿ ನೋಡಿ...ಅಲ್ಲಿ ನೋಡಿ...ಹೊರಗೆ ಆ ಮರದ ಮೇಲೆ....’’

ಕಾಸಿ ಹೊರಗೆ ಮರದ ಮೇಲೆ ನೋಡಿದ. ಏನೂ ಕಾಣಲಿಲ್ಲ. ‘‘ಏನೂ ಕಾಣ್ತಾ ಇಲ್ಲ ಸಾರ್?’’

‘‘ನೆಹರೂ ಕಣ್ರೀ...ಜವಾಹರಲಾಲ್ ನೆಹರೂ ಕಾಣ್ತಾ ಇಲ್ಲವೆ?’’

ಗೊಂದಲಗೊಂಡ ಕಾಸಿ ‘‘ಇಲ್ಲ ಸಾರ್....’’

‘‘ಏನ್ರೀ ನಿಮ್ಮ ಪತ್ರಿಕೆಗೆ ಅರ್ಧ ಪುಟ ಜಾಹೀರಾತು ಕೊಟ್ಟಿದ್ದಾರೆ. ಆದ್ರೂ ನೆಹರೂ ಕಾಣ್ತ ಇಲ್ವಾ?’’

‘‘ಓಹ್ ಈಗ ಕಂಡ್ರು ಸಾರ್. ನೆಹರೂ ಅವರು ಕಾಶ್ಮೀರದಲ್ಲಿ ಉಗ್ರರಿಗೆ ತರಬೇತಿ ಬೇರೆ ನೀಡ್ತಾ ಇದ್ದಾರೆ ಸಾರ್....’’ ಕಾಸಿ ತಕ್ಷಣ ಸುಧಾರಿಸಿ ಉತ್ತರಿಸಿದ.

‘‘ಹಾಂ...ಇನ್ನು ಎರಡನೆ ಪ್ರಶ್ನೆ ಕೇಳಿ....’’ ಮೋದಿ ಮುಂದುವರಿದರು.

‘‘ಸಾರ್....ನಿರುದ್ಯೋಗ ಹೆಚ್ಚುತ್ತಿದೆ....ಇದರ ಕುರಿತಂತೆ ಪರಿಹಾರವೇನು?’’ ಕಾಸಿ ಹೇಳಿದ.

‘‘ವಲ್ಲಭಭಾಯ್ ಪಟೇಲ್....’’ ಮೋದಿ ಉತ್ತರಿಸಿದರು.

‘‘ನಿರುದ್ಯೋಗಕ್ಕೂ ಪಟೇಲರಿಗೂ ಏನು ಸಂಬಂಧ ಸಾರ್?’’ ಕಾಸಿ ಕೇಳಿದ.

‘‘ವಲ್ಲಭಭಾಯ್ ಪಟೇಲ್ ಈ ದೇಶದ ಮೊದಲ ಪ್ರಧಾನಿಯಾಗಿದ್ದಿದ್ದರೆ ಎಲ್ಲ ಸಮಸ್ಯೆಗಳೂ ನಿವಾರಣೆಯಾಗುತ್ತಿತ್ತು. ಈ ದೇಶದ ಮೊದಲ ಪ್ರಧಾನಿಯಾಗಿ ನೆಹರೂ ಆಯ್ಕೆಯಾದರು. ಆದುದರಿಂದಲೇ ಇಂದು ನಿರುದ್ಯೋಗ ಹೆಚ್ಚುತ್ತಿದೆ’’ ಮೋದಿ ಉತ್ತರಿಸಿದರು.

‘‘ಅರ್ಥವಾಗಲಿಲ್ಲ ಸಾರ್...’’ ಕಾಸಿ ಹೇಳಿದ.

‘‘ಅರ್ಥವಾಗುವ ಹಾಗೆ ಮತ್ತೆ ಬೇರೆ ಉತ್ತರವನ್ನು ನಮ್ಮ ಅಂಬಾನಿ ಕಡೆಯವರು ಬರೆದು ಕಳುಹಿಸುತ್ತಾರೆ. ಈಗ ಇದನ್ನು ಬರೆದುಕೊಳ್ಳಿ...’’ ಮೋದಿ ಸಮಸ್ಯೆಯನ್ನು ಬಗೆ ಹರಿಸಿದರು.

‘‘ರಾಜಸ್ಥಾನ ಉಪಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ಬಗ್ಗೆ ಏನು ಹೇಳುತ್ತೀರಿ...’’ ಕಾಸಿ ಕೇಳಿದ.

‘‘ಇಂದಿರಾಗಾಂಧಿ...’’

‘‘ಅರ್ಥ ಆಗಲಿಲ್ಲ ಸಾರ್...’’ ಕಾಸಿ ಮತ್ತೆ ಹೇಳಿದ.

‘‘ಇಂದಿರಾಗಾಂಧಿ ಈ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು...ಗೊತ್ತೇನ್ರೀ...’’ ಮೋದಿ ಕೇಳಿದರು.

‘‘ಗೊತ್ತು ಸಾರ್’’ ಕಾಸಿ ಬೆವರುತ್ತಾ ಹೇಳಿದ.

‘‘ಸರಿ. ಹಾಗಾದರೆ ಮುಂದಿನ ಪ್ರಶ್ನೆ ಕೇಳಿ....’’

‘‘ಸಾರ್ ಅದೇ ಹಿಂದಿನ ಪ್ರಶ್ನೆಗೆ ಉತ್ತರ ಹೇಳಲಿಲ್ಲ....’’

‘‘ಆಗಲೇ ಹೇಳಿದ್ದೇನೆ. ನಿಮಗೆ ಅರ್ಥವಾಗದೆ ಇದ್ದರೆ ನಮ್ಮವರು ನಿಮ್ಮ ಕಚೇರಿಗೆ ನೇರವಾಗಿ ಮೇಲ್ ಮಾಡ್ತಾರೆ. ಅದನ್ನು ಕಾಪಿ ಮಾಡ್ಕೊಳ್ಳಿ....’’ ಮೋದಿ ಆದೇಶ ನೀಡಿದರು.

‘‘ಸರಿ ಸಾರ್. ದೇಶದ ಆರೋಗ್ಯ ಸೂಚ್ಯಂಕ ಕುಗ್ಗಿದೆ ಎಂದು ಹೇಳುತ್ತಾರೆ....’’ ಕಾಸಿ ಮತ್ತೆ ಕೇಳಿದ.

‘‘ರಾಮಾಯಣ, ಶೂರ್ಪನಖಿ, ಅಟ್ಟ ಹಾಸ.....’’ ಎಂದು ಹೇಳಿದ ಮೋದಿ ವೌನವಾದರು.

‘‘ಹಾಗೆಂದರೆ....’’ ಕಾಸಿ ಮತ್ತೆ ಗೊಂದಲದಲ್ಲಿ ಕೇಳಿದ.

 ‘‘ನೋಡ್ರೀ...ಸಮಸ್ಯೆ ನಾನು ಹೇಳುವ ಉತ್ತರದಲ್ಲಿಲ್ಲ. ನೀವು ಕೇಳುವ ಪ್ರಶ್ನೆಯಲ್ಲಿದೆ. ನೀವು ಒಂದು ಕೆಲಸ ಮಾಡಿ. ನಿಮ್ಮ ಪಕ್ಕದಲ್ಲಿರುವ ಇವಿಎಂ ಮೆಷಿನ್‌ನ ಒಳಗೆ ನಿಮ್ಮ ಎಲ್ಲ ಪ್ರಶ್ನೆಗಳನ್ನು ಬರೆದು ಹಾಕಿ.....’’ ಮೋದಿ ಸಲಹೆ ನೀಡಿದರು.

ಕಾಸಿ ಹಾಗೆಯೇ ಮಾಡಿ ‘‘ಸಾರ್ ಉತ್ತರ?’’ ಎಂದು ಕೇಳಿದ.

‘‘ನೋಡ್ರೀ ಇವಿಎಂನಲ್ಲಿ ನೀವು ಹಾಕಿದ ಪ್ರಶ್ನೆಗಳೆಲ್ಲ ನಾನು ಬಾಯಿ ಪಾಠ ಕಲಿತಿರುವ ಉತ್ತರಗಳಿಗೆ ಪೂರಕವಾಗಿ ಬದಲಾಗಿ ಹೊರಗೆ ಬರುತ್ತದೆ’’ ಎಂದು ಹಹಹಹ ಎಂದು ಗಹಗಹಿಸಿ ನಕ್ಕರು. ‘‘ಮುಂದಿನ ದಿನಗಳಲ್ಲಿ ಪತ್ರಕರ್ತರ ಪ್ರಶ್ನೆಗಳಿಗೂ ಇವಿಎಂ ಮೆಷಿನ್ ಬಳಸಲಾಗುತ್ತದೆ....’’ ಎಂದು ಮೋದಿ ಘೋಷಿಸುವುದರೊಂದಿಗೆ ಸಂದರ್ಶನ ಮುಕ್ತಾಯವಾಯಿತು.

share
-ಚೇಳಯ್ಯ chelayya@gmail.com
-ಚೇಳಯ್ಯ chelayya@gmail.com
Next Story
X