ಸಮಾಜ ಸೇವಕಿ ಖೈರುನ್ನೀಸಾ ಸೈಯದ್ ರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ

ಮೈಸೂರು, ಫೆ.11: ಮಂಗಳೂರಿನ ಹಿರಿಯ ಸಮಾಜ ಸೇವಕಿ ಖೈರುನ್ನೀಸಾ ಸೈಯದ್ ಅವರಿಗೆ ರವಿವಾರ ಇಲ್ಲಿ ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಿವಂಗತ ಸೈಯದ್ ಮುಹಮ್ಮದ್ ಕುಲಶೇಖರ ಅವರ ಪತ್ನಿ ಖೈರುನ್ನೀಸಾ ಅವರು ಕಳೆದ ಎರಡೂವರೆ ದಶಕಗಳಿಂದ ಸಲ್ಲಿಸಿರುವ ಸಮಾಜ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.
ಸಹನಾ ವಿಮೆನ್ಸ್ ಕೌನ್ಸಿಲಿಂಗ್ ಮೂಲಕ ನೂರಾರು ದಂಪತಿಗಳಿಗೆ ಕೌಟುಂಬಿಕ ಬಿಕ್ಕಟ್ಟು ಬಗೆಹರಿಸುವ ಸಲಹೆ ನೀಡುವ ತಂಡದಲ್ಲಿ ಖೈರುನ್ನೀಸಾ ಅವರು ಸಕ್ರಿಯರಾಗಿದ್ದರು.
ಮಾಜಿ ಸಚಿವ, ಸಂಸದ ಜಯಪ್ರಕಾಶ್ ಹೆಗ್ಡೆಯವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸಮಿತಿ ಅಧ್ಯಕ್ಷ ಸಚಿವ ಯು.ಟಿ.ಖಾದರ್, ಸಮಿತಿಯ ಸುಧಾಕರ್ ಶೆಟ್ಟಿ, ಮಾಜಿ ಸಚಿವೆ ರಾಣಿ ಸತೀಶ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story





