ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ: ಆರೋಪಿಗಳ ಸಹಿತ ನಗದು ವಶ
ಬಂಟ್ವಾಳ, ಫೆ. 11: ಜುಗಾರಿ ಅಡ್ಡೆಯೊಂದಕ್ಕೆ ಪೋಲೀಸರು ದಾಳಿ ನಡೆಸಿ ಆರೋಪಿಗಳ ಸಹಿತ ಲಕ್ಷಾಂತರ ರೂ. ನಗದು ವಶಕ್ಕೆ ಪಡೆದುಕೊಂಡ ಘಟನೆ ಬಿ.ಸಿ.ರೋಡಿನಲ್ಲಿ ರವಿವಾರ ನಡೆದಿದೆ.
ಬಿ.ಸಿ.ರೋಡ್ ಸಮೀಪದ ಖಾಸಗಿ ಕಟ್ಟಡವೊಂದರಲ್ಲಿ ಸುಮಾರು ದಿನಗಳಿಂದ ಅಕ್ರಮವಾಗಿ ಜುಜಾಟದಲ್ಲಿ ತೊಡಗಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಡಿಸಿಐಬಿ ಪೋಲೀಸ್ ತಂಡ ರವಿವಾರ ಈ ದಾಳಿ ನಡೆಸಿದೆ.
ಜುಜಾಟದಲ್ಲಿ ತೊಡಗಿದ್ದ ಸುಮಾರು 43 ಮಂದಿ ಅರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣವನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಮಂಗಳೂರು ಡಿಸಿಐಬಿ ಪೊಲೀಸ್ ಇನ್ಸ್ ಸ್ಪೆಕ್ಟರ್ ಸುನಿಲ್ ನಾಯಕ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Next Story





