ಮಂಗಳೂರು: ಬಿಜೆಪಿ ಮಲಯಾಳಿ ಸಮಿತಿಯಿಂದ ‘ಸಂಗಮ’ ಕಾರ್ಯಕ್ರಮ

ಮಂಗಳೂರು, ಫೆ .11: ಮಂಗಳೂರು ನಗರ ದಕ್ಷಿಣ ಬಿಜೆಪಿ ಮಲಯಾಳಿ ಸಮಿತಿಯ ಆಶ್ರಯದಲ್ಲಿ ನಗರದಲ್ಲಿ ರವಿವಾರ ‘ಸಂಗಮ-2018’ ಕಾರ್ಯಕ್ರಮ ಜರಗಿತು.
ಬಿಜೆಪಿ ಮಾಜಿ ಕೇರಳ ರಾಜ್ಯಾಧ್ಯಕ್ಷ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ವಿ. ಮುರಳೀಧರನ್ ಮಾತನಾಡಿ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣವಾಗಿ ಗೆಲುವು ಸಾಧಿಸುವ ಜತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ನರೇಂದ್ರ ಮೋದಿ ನೇತೃತ್ವದ ಸರಕಾರ ಸ್ಥಾಪನೆಗೂ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ಕರ್ನಾಟಕ ಬಿಜೆಪಿ ಮಲಯಾಳಿ ಘಟಕದ ಸಂಚಾಲಕ ಗೋಪಿನಾಥ್ ವೆನ್ನೇರಿ, ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಲಾದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್, ಬಿಜೆಪಿ ಮಲಯಾಳಿ ಘಟಕದ ಜಯಕುಮಾರ್ ಆರ್. ನಾಯರ್, ಜಿಲ್ಲಾ ಸಂಘಟಕ ವಿ.ಪಿ. ಕೃಷ್ಣರಾಜ್, ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್, ಬಿಜೆಪಿ ಮುಖಂಡರಾದ ಕೆ. ಮೋನಪ್ಪ ಭಂಡಾರಿ, ಎನ್.ಯೋಗೀಶ್ ಭಟ್, ಸಂಜಯ್ ಪ್ರಭು, ಟಿ.ಕೆ.ರಾಜನ್, ರೂಪಾ ಡಿ.ಬಂಗೇರ, ಪೂಜಾ ಪೈ, ದೇವದಾಸ್, ಮಧು, ಆದಿತ್ಯ ಉದಯ್ ಮುಂತಾದವರು ಉಪಸ್ಥಿತರಿದ್ದರು.
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಮಲಯಾಳಿ ಸಮಿತಿ ಪ್ರಮುಖ ಸಿ.ಎಸ್.ಪ್ರದೀಪ್ ಕುಮಾರ್ ಸ್ವಾಗತಿಸಿದರು.







