ಆದ್ಯಪಾಡಿ: ರಕ್ತದಾನ ಶಿಬಿರ

ಮಂಗಳೂರು, ಫೆ.11: ಜಿಲ್ಲೆಯ ಯುವಜನ ಚಳುವಳಿಗೆ ನಾಯಕತ್ವ ಕೊಟ್ಟಿದ್ದ ಸಂಗಾತಿ ರಮೇಶ್ ಕುಮಾರ್ ಅದ್ಯಪಾಡಿ ಸ್ಮರಣಾರ್ಥ ಡಿವೈಎಫ್‌ಐ ಅದ್ಯಪಾಡಿ ಘಟಕದ ಆಶ್ರಯದಲ್ಲಿ ರವಿವಾರ ರಕ್ತದಾನ ಶಿಬಿರವು ಅದ್ಯಪಾಡಿ ಸರಕಾರಿ ಶಾಲೆಯಲ್ಲಿ ನಡೆಯಿತು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಶಿಬಿರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಿಎಸ್ಸೆಸ್ಸ್ ಜಿಲ್ಲಾ ಸಂಘಟಕ ಕೃಷ್ಣಾನಂದ, ಡಿವೈಎಫ್‌ಐ ನಗರಾಧ್ಯಕ್ಷ ನವೀನ್ ಕೊಂಚಾಡಿ, ಸ್ಥಳೀಯರಾದ ಪುಷ್ಪರಾಜ್ ಕುಲಾಲ್, ಘಟಕದ ಅಧ್ಯಕ್ಷ ಟಿ.ಉಸ್ಮಾನ್, ಸ್ಥಳೀಯ ಮುಖಂಡರಾದ ಬದ್ರುದ್ದೀನ್, ಸಿದ್ದೀಕ್, ಖಾದರ್, ನಿಝಾಮುದ್ದೀನ್, ರಶೀದ್ ಉಪಸ್ಥಿತರಿದ್ದರು.
Next Story





