ಐಇಡಿ ಸ್ಫೋಟಗೊಂಡು ಯೋಧ ಸಾವು

ರಾಯ್‌ಪುರ, ಫೆ. 11: ಚತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲೀಯರು ಇರಿಸಿದ್ದ ಪ್ರೆಶರ್ ಬಾಂಬ್ ರವಿವಾರ ಸ್ಫೋಟಗೊಂಡು ಪರಿಣಾಮ ಯೋಧರೊಬ್ಬರು ಮೃತಪಟ್ಟಿದ್ದಾರೆ.
ಇಲ್ಲಿಂದ 500 ಕಿ.ಮೀ. ದೂರದಲ್ಲಿರುವ ತಿಪ್ಪಾಪುರಂ ಸಮೀಪದ ಅರಣ್ಯದಲ್ಲಿ ಡಿಆರ್‌ಜಿ ತಂಡ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಬಾಂಬ್ ಸ್ಫೋಟಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟ ಯೋಧನನ್ನು ಸೊಂಧರ್ ಹೇಮ್ಲಾ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story





