ಶಾರ್ಟ್ ಸರ್ಕ್ಯೂಟ್ : ವ್ಯಕ್ತಿ ಮೃತ್ಯು

ಮಂಡ್ಯ, ಫೆ.11: ಪಾಂಡಪವಪುರ ತಾಲೂಕಿನ ಮಡಿಕೆಪಟ್ಟಣ ಗೇಟ್ ಸಮೀಪ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮರದಿಂದ ಕಳೆಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ. ತಾಲೂಕಿನ ಚಿಕ್ಕಾಡೆ ಗ್ರಾಮದ ಕೃಷ್ಣ(45) ಮೃತ ವ್ಯಕ್ತಿ.
ಮೃತ ಕೃಷ್ಣ ಶನಿವಾರ ಸಂಜೆ ಮಡಿಕೆಪಟ್ಟಣ ಗೇಟ್ ಸಮೀಪದ ಮರವೊಂದರಲ್ಲಿ ಮೇಕೆಗಳಿಗೆ ಸೋಪ್ಪು ಕಡಿಯುತ್ತಿದ್ದ ಸಂದರ್ಭದಲ್ಲಿ ಮರದಿಂದ ಬಿದ್ದ ಸೊಪ್ಪು ವಿದ್ಯುತ್ ತಂತಿ ಮೇಲೆ ಬಿದ್ದು ಶಾರ್ಟ್ ಶಾರ್ಟ್ ಸರ್ಕ್ಯೂಟ್ ಆಗಿ ಈ ಅವಘಡ ಸಂಭವಿಸಿದೆ.
ರವಿವಾರ ಬೆಳಗ್ಗೆ ರೈತರು ಜಮೀನಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





