ಕೊಣಾಜೆ; ಗಾಂಜಾ ಮಾರಾಟಗಾರನ ಬಂಧನ

ಮಂಗಳೂರು, ಫೆ. 11: ಕೊಣಾಜೆ ಠಾಣೆ ಪೊಲೀಸರು ಹಾಗೂ ರೌಡಿ ನಿಗ್ರಹ ದಳದವರು ಗಾಂಜಾ ಮಾರಾಟಗಾರನೊಬ್ಬನನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ನೆತ್ತಿಲಪದವು ನಿವಾಸಿ ಅಬ್ದುಲ್ ನಿಸಾರ್ ಬಂಧಿತ ಆರೋಪಿ.
ಈತ ಕೋಲಾರದಿಂದ ಗಾಂಜಾವನ್ನು ಖರೀದಿಸಿ ಮಂಜೇಶ್ವರ ಉಪ್ಪಳ ಕಡೆಗಳಲ್ಲಿ ಮಾರಾಟ ಮಾಡಲು ಕೊಂಡು ಹೋಗುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ನೆತ್ತಿಲಪದವು ಎಂಬಲ್ಲಿಂದ ಬಂಧಿಸಿದ ಪೊಲೀಸರು ಆತನಿಂದ 2 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Next Story





