ಉಡುಪಿ: ದೃಷ್ಠಿದೋಷವುಳ್ಳವರಿಗೆ ತರಬೇತಿ ಶಿಬಿರ
ಉಡುಪಿ, ಫೆ.12: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಅನುಷ್ಠಾನಗೊಳಿಸುತ್ತಿರುವ ದೃಷ್ಠಿದೋಷವುಳ್ಳವರಿಗೆ ಚಲನವಲನ ತರಬೇತಿ ಹಾಗೂ ಬ್ರೈಲ್ ತರಬೇತಿಯ ತರಗತಿಗಳನ್ನು ಪ್ರತಿ ರವಿವಾರ ಬೆಳಗ್ಗೆ 9:30ಕ್ಕೆ ಅಜ್ಜರಕಾಡಿನ ರೆಡ್‌ಕ್ರಾಸ್ ಭವನದಲ್ಲಿರುವ ಜಿಲ್ಲಾ ವಿಕಲಚೇತನರ ಪುನರ್ವತಿ ಕೇಂದ್ರದಲ್ಲಿ ನಡೆಸಲಾಗುತ್ತಿದೆ.
ತಜ್ಞರು ತರಬೇತಿ ನೀಡಲಿದ್ದು, ಆಸಕ್ತರು ಈ ತರಬೇತಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 0820-2533322/9164276061 ಅಥವಾ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಡಿಡಿಆರ್‌ಸಿ ಪ್ರಕಟಣೆ ತಿಳಿಸಿದೆ.
Next Story





