ಬಸ್ ಢಿಕ್ಕಿ: ಮಹಿಳೆ ಮೃತ್ಯು
_0.jpg)
ಬೆಂಗಳೂರು, ಫೆ. 12: ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ಶರವೇಗದಲ್ಲಿ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಹರಿದು ಸ್ಥಳದಲ್ಲೆ ಮೃತಪಟ್ಟಿರುವ ದುರ್ಘಟನೆ ಕೆಂಗೇರಿ ಸಂಚಾರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕೆಂಗೇರಿ ನಿವಾಸಿ ಜಯಮ್ಮ(67) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ರವಿವಾರ ರಾತ್ರಿ 7ಗಂಟೆ ಸುಮಾರಿಗೆ ಕೆಂಗೇರಿ ಸಮೀಪದ ಸುಕೂರು ವೃತ್ತ ಬಳಿ ರಸ್ತೆ ದಾಟುತ್ತಿದ್ದಾಗ ಮೈಸೂರು ಕಡೆಗೆ ವೇಗದಲ್ಲಿ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸರು, ಬಸ್ ಚಾಲಕನನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Next Story





