ಬೆಂಗಳೂರು: ಮುಸ್ಲಿಂ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷರ ಆಯ್ಕೆ
ಬೆಂಗಳೂರು, ಫೆ.12: ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಷನ್‌ನ ಬೆಂಗಳೂರು ಜಿಲ್ಲಾಧ್ಯಕ್ಷರಾಗಿ ಮುಹಮ್ಮದ್ ಉಮರ್ ಫಾರೂಕ್ ಆಯ್ಕೆಯಾಗಿದ್ದಾರೆ.
ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫಿರೋಝ್ ಟೆರೇಸ್‌ನಲ್ಲಿ ನಡೆದ ಬೆಂಗಳೂರು ಜಿಲ್ಲಾ ಎಂಎಸ್‌ಎಫ್ ಕೌನ್ಸಿಲ್ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಜಿಲ್ಲಾಧ್ಯಕ್ಷ ಕೆ.ಎನ್.ಶಹಝಾದ್ ಅಧ್ಯಕ್ಷತೆಯಲ್ಲಿ, ಎಂಎಸ್‌ಎಫ್ ರಾಷ್ಟ್ರೀಯ ಉಪಾಧ್ಯಕ್ಷ ಸಿರಾಜುದ್ದೀನ್ ನದ್ವಿ, ರಾಷ್ಟ್ರ ಸಮಿತಿಯ ಕೋಶಾಧಿಕಾರಿ ನೌಷಾದ್ ಮಲಾರ್, ರಾಜ್ಯಾಧ್ಯಕ್ಷ ಅಡ್ವಕೇಟ್ ಜಲೀಲ್ ನಂದಾವರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹೀಮ್ ಬಾದಿಶಾ ಕೊಡ್ಲಿಪೇಟೆ ಸಮಕ್ಷಮದಲ್ಲಿ ಈ ಆಯ್ಕೆ ನಡೆಯಿತು.
ಇತರ ಪದಾಧಿಕಾರಿಗಳು: ರಫೀಕ್ ಹುದವಿ (ಪ್ರಧಾನ ಕಾರ್ಯದರ್ಶಿ), ಸೈಯ್ಯದ್ ಅಹ್ಮದ್(ಕೋಶಾಧಿಕಾರಿ), ಫವಾಝ್ ಟಿ.ಎ.(ಸಂಘಟನಾ ಕಾರ್ಯದರ್ಶಿ), ರಿಯಾಝ್ ಗಝ್ಝಲಿ, ಶಾಜಲ್ ಹುದವಿ ಸಿ.ಎಚ್, ಯೂನುಸ್ ಖಾನ್, ಸೈಫುಲ್ಲಾ (ಉಪಾಧ್ಯಕ್ಷರು), ಅಕ್ಮಲ್ ಪಾಷಾ, ಮುಹಮ್ಮದ್ ಬಿಶರ್ ಹುದವಿ, ಸಲ್ಮಾನ್ ಟಿ.ಎ, ಮುಹಮ್ಮದ್ ಯೂಸುಫ್(ಸಹ ಕಾರ್ಯದರ್ಶಿಗಳು).
ಕೌನ್ಸಿಲ್ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಎನ್.ಜಾವೀದುಲ್ಲಾ, ರಾಜ್ಯ ಕಾರ್ಯದರ್ಶಿ ಇಬ್ರಾಹೀಮ್ ಎ ಜೋಕಟ್ಟೆ, ಬೆಂಗಳೂರು ಜಿಲ್ಲಾಧ್ಯಕ್ಷ ಡಾ.ಮುಹಮ್ಮದ್ ಫಾರೂಕ್, ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ರಫಿಕ್, ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಅಧ್ಯಕ್ಷ ಸೈಯ್ಯದ್ ಅಝೀಮ್ ಅಝೀಝ್ ಭಾಗವಹಿಸಿದ್ದರು.







