ಕೊಲೆ ಯತ್ನ ಆರೋಪಿಯ ಬಂಧನ
ಮಂಗಳೂರು, ಫೆ. 12: ತಲವಾರಿನಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದ ಪ್ರಕರಣದ ಆರೋಪಿಯೋರ್ವನನ್ನು ಎಸಿಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳ ಸೋಮವಾರ ಬಂಧಿಸಿದೆ.
ಉಳ್ಳಾಲ ಮೊಗವೀರಪಟ್ಣದ ರಜನೀಶ್ (32) ಬಂಧಿತ ಆರೋಪಿ.
ಆರೋಪಿ ರಜನೀಶ್ ಕಳೆದ ವರ್ಷ ಮಾರ್ಚ್ 26ರಂದು ರಾತ್ರಿ ಉಳ್ಳಾಲದಿಂದ ಮುಕ್ಕಚ್ಚೇರಿಯ ಕಡೆಗೆ ತೆರಳುತ್ತಿದ್ದ ನೌಷಾದ್ ಹುಸೈನ್ ಎಂಬವರಿಗೆ ತಲವಾರಿನಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
Next Story





