ಮಹಿಳೆ ನಾಪತ್ತೆ
ಉಡುಪಿ, ಫೆ.12: ನಿಟ್ಟೂರು ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಸುಶೀಲ ಗಾಣಿಗ ಎಂಬವರ ಮನೆಯಲ್ಲಿ ಫೆ.11ರಂದು ನಡೆದ ಸ್ವಸಹಾಯ ಸಂಘದ ಸಭೆಯಲ್ಲಿ ಭಾಗವಹಿಸಿ ಸಂಜೆ 5:30ರ ಸುಮಾರಿಗೆ ಮನೆಗೆ ಹೋಗುವುದಾಗಿ ಹೇಳಿ ಹೋದ ಸ್ಥಳೀಯ ನಿವಾಸಿ ದಿನೇಶ್ ಪೂಜಾರಿ ಎಂಬವರ ಪತ್ನಿ ಜ್ಯೋತಿ(40) ಎಂಬವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





