ಜುಗಾರಿ: 13 ಮಂದಿ ಬಂಧನ
ಮಲ್ಪೆ, ಫೆ.12: ಮಲ್ಪೆಬಂದರಿನ ಹಳೆ ಜೆಟ್ಟಿಯ ಹತ್ತಿರ ಫೆ.12ರಂದು ಮಧ್ಯಾಹ್ನ 12.30ರ ಸುಮಾರಿಗೆ ಇಸ್ಪೀಟು ಜುಗಾರಿ ಆಡುತ್ತಿದ್ದ 13 ಮಂದಿ ಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಂತೋಷ, ದಯಾನಂದ ಕೋಟ್ಯಾನ್, ಸುಧಾ, ನವೀನ್ ಅಮೀನ್, ಕುಮಾರೇಶ, ಮಧು ಬಂಗೇರ, ದೇವೆಂದ್ರ, ಕೃಷ್ಣ, ಸತೀಶ, ಪ್ರವೀತ್, ದಯಾನಂದ ಕೋಟ್ಯಾನ್, ದನಂಜಯ, ಸುರೇಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 20,100ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





