ಫೆ.17: ಅನಂತಕೃಷ್ಣರಿಗೆ ಕೆ.ಕೆ.ಪೈ ರಾ.ಬ್ಯಾಂಕಿಂಗ್ ಪ್ರಶಸ್ತಿ ಪ್ರದಾನ

ಉಡುಪಿ, ಫೆ.12: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಿಗೆ ನೀಡುವ ಕೆ.ಕೆ.ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿಯನ್ನು ಕರ್ಣಾಟಕ ಬ್ಯಾಂಕಿನಲ್ಲಿ ಅದ್ವಿತೀಯ ಸಾಧನೆಗೈದು ನಿವೃತ್ತರಾದ ಅನಂತಕೃಷ್ಣ ಅವರಿಗೆ ನೀಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಫೆ.17ರ ಸಂಜೆ 4 ಗಂಟೆಗೆ ಮಣಿಪಾಲದ ಟ್ಯಾಪ್ಮಿಯಲ್ಲಿ ನಡೆಯಲಿದ್ದು, ಕೆ.ಕೆ.ಪೈ ಟ್ರಸ್ಟಿನ ಅಧ್ಯಕ್ಷರಾದ ಟಿ. ಸತೀಶ್ ಯು.ಪೈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಸತೀಶ್ ಕಾಮತ್, ಮಾಹೆಯ ಪ್ರೊಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಟ್ಯಾಪ್ಮಿ ನಿರ್ದೇಶಕ ಪ್ರೊ.ಮಧು ವೀರರಾಘವನ್ ಸಮಾಭಂದಲ್ಲಿ ಭಾಗವಹಿಸಲಿದ್ದಾರೆ ಎಂದು ಕೆ.ಕೆ.ಪೆ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





