ಕೆಎಂಸಿ ಆಸ್ಪತ್ರೆಗೆ ನೂತನ ವೈದ್ಯಕೀಯ ಅಧೀಕ್ಷಕರಾಗಿ ಡಾ.ಅವಿನಾಶ್ ನೇಮಕ

ಉಡುಪಿ, ಫೆ.12: ಮಣಿಪಾಲ ಕಸ್ತುರ್ಬಾ ಆಸ್ಪತ್ರೆಯ ನೂತನ ವೈದ್ಯಕೀಯ ಅಧೀಕ್ಷಕರಾಗಿ ಡಾ. ಅವಿನಾಶ್ ಶೆಟಿ ನೇಮಕಗೊಂಡಿದ್ದಾರೆ.
ಡಾ. ಅವಿನಾಶ್ ಶೆಟ್ಟಿ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಿಂದ ಕಮ್ಯುನಿಟಿ ಮೆಡಿಸಿನ್‌ನಲ್ಲಿ ಕ್ರಮವಾಗಿ 1993 ಮತ್ತು 2001ರಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದಿದ್ದಾರೆ. 2001ರಲ್ಲಿ ಡಾ.ಅವಿನಾಶ್, ಕೆಎಂಸಿ ಮಣಿಪಾಲದ ಕಮ್ಯುನಿಟಿ ಮೆಡಿಸಿನ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು. 2015ರವರೆಗೆ ಕಾರ್ಕಳದ ಡಾ.ಟಿ. ಎಂ.ಎ.ಪೈ ರೋಟರಿ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿಯಾಗಿ ಒಟ್ಟು 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಡಾ. ಶೆಟ್ಟಿ 2015ರಿಂದ 2018ರ ತನಕ ಮಣಿಪಾಲ ಕೆಎಂಸಿಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿದ್ದರು. ಉಡುಪಿ ಜಿಲ್ಲೆ ಯಲ್ಲಿ ಸಾರ್ವಜನಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಲ್ಲಿ ಡಾ. ಶೆಟ್ಟಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Next Story





