ಉಡುಪಿ; ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟನೆ

ಉಡುಪಿ, ಫೆ.12: ನಗರಸಭಾ ವ್ಯಾಪ್ತಿಯ ಕುತ್ಪಾಡಿ 12ನೇ ವಾರ್ಡ್‌ನ ಬಬ್ಬರ್ಯ ದೈವಸ್ಥಾನದ ಬಳಿ ಜಿಪಂ ಮತ್ತು ತಾಪಂ ಅನುದಾನದಿಂದ ಕಾಂಕ್ರಿಟೀಕರಣ ಗೊಂಡ ರಸ್ತೆಯನ್ನು ಸೋಮವಾರ ಬೆಳಗ್ಗೆ, ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಉಪಸ್ಥಿತಿಯಲ್ಲಿ ಕಡೆಕಾರ್ ತಾಪಂ ಸದಸ್ಯೆ ಶಿಲ್ಪಾ ಆರ್. ಕೋಟ್ಯಾನ್ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಕಡೆಕಾರ್ ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ರೀಕೇಶ್ ಪೂಜಾರಿ, ಗ್ರಾಪಂ ಸದಸ್ಯರಾದ ವಿನೋದಿನಿ ಶೇಖರ್, ಸಬಿತ ಕೃಷ್ಣ, ಸುಶೀಲ, ಉಡುಪಿ ತಾಪಂನ ಮಾಜಿ ಉಪಾಧ್ಯಕ್ಷ ಗಣೇಶ್ ಕುಮಾರ್, 12ನೇ ವಾರ್ಡ್ ಬಿಜೆಪಿ ಅಧ್ಯಕ್ಷ ಸಂದೀಪ್ ಪೂಜಾರಿ, ಹಿರಿಯರಾದ ವಾಸು ಪೂಜಾರಿ, ಉಮೇಶ್ ಪೂಜಾರಿ, ಬಬ್ಬರ್ಯ ಗುಡ್ಡೆ ಫ್ರೆಂಡ್ಸ್‌ನ ಚೇತನ್ ಜತ್ತನ್, ಅಶ್ವಥ್ ಜತ್ತನ್, ಆರವಿಂದ್ ಪಾಲನ್ ಹಾಗೂ ಬಬ್ಬರ್ಯ ಗುಡ್ಡೆ ಗ್ರಾಮಸ್ಥರು ಉಪಸ್ಥಿತರಿದ್ದರು.
Next Story





