Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮಡಿಕೇರಿ: ‘ಬಂಗಾರದ ಎಲೆಗಳು’ ಯೋಜನೆ;...

ಮಡಿಕೇರಿ: ‘ಬಂಗಾರದ ಎಲೆಗಳು’ ಯೋಜನೆ; ಸಾಹಿತ್ಯ ಕೃತಿ, ಮೂಲ ಲೇಖಕರ ಮಾಹಿತಿ ಸಂಗ್ರಹ

ವಾರ್ತಾಭಾರತಿವಾರ್ತಾಭಾರತಿ12 Feb 2018 10:58 PM IST
share
ಮಡಿಕೇರಿ: ‘ಬಂಗಾರದ ಎಲೆಗಳು’ ಯೋಜನೆ; ಸಾಹಿತ್ಯ ಕೃತಿ, ಮೂಲ ಲೇಖಕರ ಮಾಹಿತಿ ಸಂಗ್ರಹ

ಮಡಿಕೇರಿ, ಫೆ.12 :ಕರ್ನಾಟಕ ಸಾಹಿತ್ಯ ಅಕಾಡೆಮಿ ಐದು ವಿನೂತನ ಯೋಜನೆಗಳನ್ನು ಹಮ್ಮಿಕೊಂಡಿದ್ದು, ‘ಬಂಗಾರದ ಎಲೆಗಳು’ ಯೋಜನೆಯಡಿ 1920 ರಿಂದ 2020ರವರೆಗಿನ ಒಂದು ಶತಮಾನದ ಅವಧಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳನ್ನು ಮತ್ತು ಅದರ ಮೂಲ ಲೇಖಕರ ಮಾಹಿತಿಯನ್ನು ದಾಖಲಿಸುವ ಮಹತ್ವದ ಕಾರ್ಯ ನಡೆಯಲಿದೆ ಎಂದು ಯೋಜನೆಯ ಕ್ಷೇತ್ರ ತಜ್ಞರಾದ ಟಿ.ಪಿ.ರಮೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೊಡಗು ಸೇರಿದಂತೆ ಮೈಸೂರು ವಿಭಾಗದ 8 ಜಿಲ್ಲೆಗಳಿಗೆ ಅನ್ವಯವಾಗುವಂತೆ ಒಂದು ಶತಮಾನದ ಅವಧಿಯಲ್ಲಿ ಆಯಾ ಜಿಲ್ಲೆಯ ಲೇಖಕರುಗಳು ಪ್ರಕಟಿಸಿದ ಪ್ರಮುಖ ಕೃತಿಗಳು, ಸ್ಮರಣ ಸಂಚಿಕೆಗಳು ಹಾಗೂ ವಿಶೇಷಾಂಕಗಳಲ್ಲಿ ಪ್ರಕಟಗೊಂಡ ಲೇಖನಗಳನ್ನು ದಾಖಲಿಸುವ ಕೆಲಸ ನಡೆಯಲಿದೆ ಎಂದರು.

ಬಂಗಾರದ ಎಲೆಗಳು ಯೋಜನೆಯನ್ನು ಕಾರ್ಯಗತಗೊಳಿಸಲು ರಾಜ್ಯದ 30 ಜಿಲ್ಲೆಗಳಿಗೂ ಕ್ಷೇತ್ರ ತಜ್ಞರುಗಳನ್ನು ಅಕಾಡೆಮಿ ನೇಮಿಸಿದೆ. ಕಳೆದ ಡಿ.7 ಮತ್ತು 8 ರಂದು ಬೆಂಗಳೂರಿನ ಕನ್ನಡ ಭವನದಲ್ಲಿ ಕ್ಷೇತ್ರ ತಜ್ಞರ ಸಮಾಲೋಚನಾ ಸಭೆ ಮತ್ತು ಕಾರ್ಯಾಗಾರದಲ್ಲಿ ಯೋಜನೆಯ ಜಾರಿಯ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ ಎಂದು ತಿಳಿಸಿದರು. 

ಕೊಡಗು ಜಿಲ್ಲೆಯಲ್ಲಿ 1920 ರಿಂದ ಇಲ್ಲಿಯವರೆಗೆ ಪ್ರಕಟವಾಗಿರುವ ಸಾಹಿತ್ಯ ಕೃತಿಗಳನ್ನು ಅವುಗಳ ಲೇಖಕರ ವಿವರಗಳೊಂದಿಗೆ ದಾಖಲಿಸುವ ಸಲುವಾಗಿ ಜಿಲ್ಲೆಯ ಲೇಖಕರುಗಳು ತಮ್ಮ ಪ್ರಕಟಿತ ಕೃತಿಗಳನ್ನು ‘ಟಿ.ಪಿ. ರಮೇಶ್, ಕ್ಷೇತ್ರ ತಜ್ಞ, ಬಂಗಾರದ ಎಲೆಗಳು, ನಂ.8, ನಿರ್ಮಲ ನಿಲಯ, ಸಮತ ಜೋಸೆಫರ ಕಾನ್ವೆಂಟ್ ಬಳಿ, ಮಡಿಕೇರಿ-571201’ ಇಲ್ಲಿಗೆ ಕಳುಹಿಸಿಕೊಡುವಂತೆ ವಿನಂತಿದ ರಮೇಶ್, ಮಾಹಿತಿಗಾಗಿ ದೂ.9448422511 ನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ಸಾಹಿತ್ಯ ಕೃತಿಗಳ ಬಗ್ಗೆ ಮಾಹಿತಿಯನ್ನು ಕಳುಹಿಸಿಕೊಡುವ ಸಂದರ್ಭ ಸಾಹಿತಿಯ ಪೂರ್ಣ ಹೆಸರು, ಭಾವಚಿತ್ರ, ಉಪನಾಮವಿದ್ದಲ್ಲಿ ಅದನ್ನು ನಮೂದಿಸಬೇಕು. ಹುಟ್ಟಿದ ಸ್ಥಳ, ಗ್ರಾಮ, ತಾಲೂಕು, ಜಿಲ್ಲೆ , ತಂದೆ –ತಾಯಿಯ ಹೆಸರು, ಹುಟ್ಟಿದ ದಿನಾಂಕ, ಲೇಖಕರು ತೀರಿಕೊಂಡಿದ್ದಲ್ಲಿ ನಿಧನರಾದ ದಿನಾಂಕ, ಅವರ ವಿದ್ಯಾಭ್ಯಾಸ, ಉದ್ಯೋಗದ ಮಾಹಿತಿಯನ್ನು ನಮೂದಿಸಬೇಕು.  ಕೃಷಿಕ, ಶಿಕ್ಷಕ ಹುದ್ದೆಯ ಹೆಸರನ್ನು ನಮೂದಿಸುವುದು ಬೇಡವೆಂದ ರಮೇಶ್, ಪುಸ್ತಕದ ಮೊದಲ ಮುದ್ರಣದ ವರ್ಷ ಲಭ್ಯವಿದ್ದರೆ ಅದನ್ನು ನಮೂದಿಸಬೇಕು. ಲೇಖಕರಿಗೆ ಸಂದ ಪ್ರಶಸ್ತಿಗಳು, ಇತರ ಸಾಹಿತ್ಯಿಕ ಚಟುವಟಿಕೆಗಳನ್ನು ನಮೂದಿಸಬೇಕೆಂದು ವಿವರಗಳನ್ನು ನೀಡಿದರು.

ಮಾಹಿತಿ ಕಳುಹಿಸಿಕೊಡುವವರ ಸಂಪರ್ಕ ವಿಳಾಸ, ದೂರವಾಣಿ ಇ-ಮೇಲ್ ವಿವರಗಳನ್ನು ನೀಡಬೇಕು. ಸ್ಮರಣ ಸಂಚಿಕೆಗಳನ್ನು ಲೇಖಕರುಗಳ ಬರಹ ಪ್ರಕಟವಾಗಿದ್ದಲ್ಲಿ ಅದನ್ನು ತಲುಪಿಸಬಹುದಾಗಿದೆ. ಅಪ್ರಕಟಿತ ಲೇಖನಗಳಿದ್ದಲ್ಲಿ ಅದರ ಜೆರಾಕ್ಸ್ ಪ್ರತಿಗಳನ್ನು ಕಳುಹಿಸಬಹುದು. ಸಾಹಿತ್ಯ ಅಕಾಡೆಮಿ ಕೋರಿರುವ ಎಲ್ಲ ಅಂಶಗಳನ್ನು ಅರ್ಜಿ ನಮೂನೆಯಲ್ಲಿ ತುಂಬಿ ತನಗೆ ಕಳುಹಿಸಿಕೊಡಬೇಕೆಂದ ರಮೇಶ್, ಅರ್ಜಿ ನಮೂನೆ ಅಗತ್ಯವಿರುವವರಿಗೆ ಅಂಚೆ ಮೂಲಕ ಕಳುಹಿಸಲಾಗುವುದು. ಲಭ್ಯ ಹಳೆಯ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದಲ್ಲಿ ತಾನೇ ಖುದ್ದು ಸ್ಥಳಕ್ಕೆ ತೆರಳಿ ಮಾಹಿತಿಯನ್ನು ಕಲೆ ಹಾಕುವುದಾಗಿ ತಿಳಿಸಿದರು.

ಚಕೋರ ಯೋಜನೆ; ಅಕಾಡೆಮಿಯ ಮಹತ್ವದ ಯೋಜನೆಗಳಲ್ಲಿ ಒಂದಾದ ‘ಚಕೋರ ಯೋಜನೆ’ಯಡಿ ಆಯಾ ಜಿಲ್ಲೆಯ 30 ಮಂದಿ ಲೇಖಕರ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗುತ್ತದೆ ಮತ್ತು ಈ ವೇದಿಕೆಯ ಮೂಲಕ ಪ್ರತಿ ತಿಂಗಳು ಕವಿ -ಕಾವ್ಯ ವಿಮರ್ಶೆ, ಸಂವಾದ, ಇಬ್ಬರು ಕವಿಗಳ ಮುಖಾಮುಖಿ, ಕವಿ ಮತ್ತು ವಿಮರ್ಶಕರ ಮುಖಾಮುಖಿ ಹೀಗೆ ಕಾವ್ಯ ವಿಮರ್ಶೆ ಕೇಂದ್ರಿತವಾದ ಸಾಹಿತ್ಯ ಕಾರ್ಯಕ್ರಗಳನ್ನು ಆಯೋಜಿಸಲಾಗುತ್ತದೆ. ಯುವ ಬರಹಗಾರರನ್ನು ಸಾಹಿತ್ಯ ಕ್ಷೇತ್ರಕ್ಕೆ ಆಕರ್ಷಿಸುವ ಉದ್ದೇಶದಿಂದ ಅಕಾಡೆಮಿ ‘ಯುವ ಕಾವ್ಯಾಭಿಯಾನ ಯೋಜನೆ’ಯನ್ನು ಹಮ್ಮಿಕೊಂಡಿದ್ದು, ಈ ಯೋಜನೆಯಡಿ ರಾಜ್ಯದ 15 ಭಾಗಗಳಲ್ಲಿ ನಡೆಯಲಿದೆ. ಪ್ರತಿಯೊಂದು ಭಾಗದ ಕಮ್ಮಟ ಎರಡು ಜಿಲ್ಲೆಗಳನ್ನು ಒಳಗೊಂಡಿರುತ್ತದೆ ಮತ್ತು ಕಮ್ಮಟದಲ್ಲಿ 100 ರಿಂದ 150 ಮಂದಿ ಯುವ ಜನರನ್ನು ಆಯ್ಕೆ ಮಾಡಲಾಗುತ್ತದೆ ಎಂದು ರಮೇಶ್ ಮಾಹಿತಿ ನೀಡಿದರು.

ಐದು ಯೋಜನೆಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಂಗಾರದ ಎಲೆಗಳು, ಚಕೋರ ಯೋಜನೆ, ಯುವ ಕಾವ್ಯಾಭಿಯಾನ ಯೋಜನೆ ಒಳಗೊಂಡಂತೆ ‘ವಜ್ರದ ಬೇರುಗಳು’ ಯೋಜನೆಯ ಕನ್ನಡ ಸಾಹಿತ್ಯ ಪ್ರಕಾರಗಳ ಮಾಲಿಕೆ, ದಲಿತ ಕ್ರೈಸ್ತ ಸಾಂಸ್ಕೃತಿಕ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X