ಸರಕಾರಿ ಸ್ಥಳದಲ್ಲಿ ಅಕ್ರಮ ಕಟ್ಟಡ ನಿರ್ಮಾಣ: ನಗರಸಭೆಯಿಂದ ತೆರವು ಕಾರ್ಯಾಚರಣೆ

ಪುತ್ತೂರು, ಫೆ. 12: ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ ಪಡ್ಡಾಯೂರು ಎಂಬಲ್ಲಿ ಅಕ್ರಮವಾಗಿ ವಾಸದ ಕಟ್ಟಡ ನಿರ್ಮಾಣ ವನ್ನು ಸೋಮವಾರ ನಗರಸಭೆಯ ವತಿಯಿಂದ ತೆರವುಗೊಳಿಸಲಾಯಿತು.
ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರ ಮಾರ್ಗದರ್ಶನದಂತೆ ಇಂಜಿನಿಯರ್ ದಿವಾಕರ್, ಬಿಲ್‌ಕಲೆಕ್ಟರ್ ರಾಜೇಶ್, ಕಂದಾಯ ಅಧಿಕಾರಿ ರಾಮಯ್ಯ ಗೌಡ, ಪುರುಷೋತ್ತಮರವರು ಕಾರ್ಯಾಚರಣೆ ನಡೆಸಿ ಪಡ್ಡಾಯೂರಿನಲ್ಲಿ ಅಕ್ರಮವಾಗಿ ಎದ್ದು ಸಿಮೆಂಟ್ ಇಟ್ಟಿಗೆಗೆ ಸಿಮೆಂಟ್ ಶೀಟ್ ಅಳವಡಿಸಿ ನಿಂತಿದ್ದ ಕಟ್ಟಡವನ್ನು ತೆರವುಗೊಳಿಸಿದ್ದಾರೆ. ಕಟ್ಟಡವನ್ನು ನೆಲಸಮಗೊಳಿಸಲು ಜೆ.ಸಿ.ಬಿಯನ್ನು ಬಳಸಿಕೊಳ್ಳಲಾಯಿತು.
ಕಳೆದ 2 ತಿಂಗಳ ಹಿಂದೆಯಷ್ಟೆ ಪಡ್ಡಾಯೂರಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತೆರವು ಕಾರ್ಯಾಚರಣೆ ನಡೆಸಿದ ಸ್ಥಳದಲ್ಲೇ ಮತ್ತೆ ಕಟ್ಟಡ ತಲೆ ಎತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ನಗರಸಭೆ ತಕ್ಷಣ ತೆರವು ಕಾರ್ಯಾಚರಣೆ ನಡೆಸಿತು.
Next Story





