ಅಪರಿಚಿತ ವ್ಯಕ್ತಿ ಮೃತ್ಯು: ಪತ್ತೆಗೆ ಮನವಿ

ಮಂಗಳೂರು, ಫೆ. 12: ನಗರದ ಹಳೆ ಬಸ್ ನಿಲ್ದಾಣ ಬಳಿ ನಿತ್ರಾಣ ಸ್ಥಿತಿಯಲ್ಲಿದ್ದ ಸುಮಾರು 65 ವರ್ಷ ಪ್ರಾಯದ ವ್ಯಕ್ತಿಯೋರ್ವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ.
5.6 ಅಡಿ ಎತ್ತರವಿರುವ, ಬಿಳಿ ಕೂದಲು, ಕೋಲು ಮುಖ, ಸಾಧಾರಣ ಶರೀರ, ಕುರುಚಲು ಗಡ್ಡ, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರಿದ್ದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆ 0824-2220516, ಪೊಲೀಸ್ ನಿರೀಕ್ಷಕ 9480805338, ಉಪ ನಿರೀಕ್ಷಕ 9480805345 ಸಂಖ್ಯೆಯನ್ನು ಸಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





