ಸಂಜುವಾನ್ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: ಇನ್ನೊಬ್ಬ ಯೋಧನ ಮೃತದೇಹ ಪತ್ತೆ
ಮೃತರ ಸಂಖ್ಯೆ ಏಳಕ್ಕೇರಿಕೆ
ಜಮ್ಮು, ಫೆ.13: ಸಂಜುವಾನ್ ಸೇನಾ ಶಿಬಿರದೊಳಗೆ ನಡೆಸಿದ ಹುಡುಕಾಟದ ವೇಳೆ ಮತ್ತೊಬ್ಬ ಸೈನಿಕನ ಮೃತದೇಹ ಪತ್ತೆಯಾಗುವುದರೊಂದಿಗೆ ಜಮ್ಮುವಿನಲ್ಲಿ ಉಗ್ರರ ದಾಳಿಗೆ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಸೋಮವಾರ ಸಂಜೆ ನಡೆದ ಶೋಧ ಕಾರ್ಯದ ವೇಳೆ ಯೋಧನೊಬ್ಬನ ಮೃತದೇಹ ಪತ್ತೆಯಾಗಿತು. ಈ ಮೂಲಕ ಮೃತ ಯೋಧರ ಸಂಖ್ಯೆ ಆರಕ್ಕೆ ತಲುಪಿದೆ ಎಂದು ಮಂಗಳವಾರ ಭಾರತೀಯ ಸೇನೆ ತಿಳಿಸಿದೆ.
ಶನಿವಾರ ಉಗ್ರಗಾಮಿಗಳು ಸೇನಾ ನೆಲೆಯ ಮೇಲೆ ದಾಳಿ ನಡೆಸಿದ ಬಳಿಕ ಮೃತ ಯೋಧರ ಸಂಖ್ಯೆ ಆರಕ್ಕೇರಿದೆ. ಇದರಲ್ಲಿ ಓರ್ವ ನಾಗರಿಕನೂ ಮೃತಪಟ್ಟಿದ್ದ. ಆರು ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ.
ಪಾಕ್ ಪ್ರೇರಿತ ಉಗ್ರ ಸಂಘಟನೆಯ ಗುಂಪು ಫೆ.10 ರಂದು ಸಂಜುವಾನ್ ಸೇನಾ ಶಿಬಿರದೊಳಗೆ ನುಸುಳಿ ಗ್ರೆನೇಡ್ಸ್ ಹಾಗೂ ಸ್ವಯಂಚಾಲಿತ ಗುಂಡುಹಾರಾಟ ನಡೆಸಿತ್ತು. ಮೂವರು ಉಗ್ರರು ಜೂನಿಯರ್ ಕಮಿಶನ್ ಕಚೇರಿಗೆ ಪ್ರವೇಶಿಸಿದ್ದು, ಭದ್ರತಾ ಪಡೆಗಳು ನಡೆಸಿದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.
Next Story