ಬೆಂಕಿ ಆಕಸ್ಮಿಕ: ಮಹಿಳೆ ಮೃತ್ಯು
ಕುಂದಾಪುರ, ಫೆ.13: ಇಲ್ಲಿನ ಫಿಶ್ ಮಾರ್ಕೆಟ್ ರಸ್ತೆಯ ಮನೆಯಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕುಂದಾಪುರ ಫಿಶ್ ಮಾರ್ಕೆಟ್ ರಸ್ತೆಯ ನಿವಾಸಿ ಮೀನಾಕ್ಷಿ(72) ಎಂದು ಗುರುತಿಸಲಾಗಿದೆ. ಇವರ ಸೊಸೆ ಗೀತಾ ಫೆ.6ರಂದು ಬೆಳಗ್ಗೆ ಅನ್ನಕ್ಕೆ ನೀರು ಕಾಯಿಸಲು ಒಲೆಗೆ ಬೆಂಕಿ ಇಟ್ಟು ಹೋಗಿದ್ದು, ನಂತರ ಮೀನಾಕ್ಷೀ ಒಲೆಯ ಮೇಲಿಟ್ಟಿದ್ದ ಅನ್ನವನ್ನು ಇಳಿಸುವಾಗ ಆಕಸ್ಮಿ ಕವಾಗಿ ಸೀರೆಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದರೆನ್ನಲಾಗಿದೆ.
ಸುಟ್ಟ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೀನಾಕ್ಷಿ ಫೆ.12ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





