ನಾಪತ್ತೆಯಾಗಿದ್ದ ಅಪ್ರಾಪ್ತ ಯುವತಿ ಪ್ರಿಯತಮನ ಮನೆಯಲ್ಲಿ ಪ್ರತ್ಯಕ್ಷ: ಅಪಹರಣ ಆರೋಪ
ಮೈಸೂರು,ಫೆ.13: ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಯುವತಿ ಪ್ರಿಯತಮನ ಮನೆಯಲ್ಲಿ ಪ್ರತ್ಯಕ್ಷಳಾಗಿದ್ದು, ಆಕೆಯ ಪೋಷಕರು ಯುವಕನೇ ಕಿಡ್ನಾಪ್ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಅಪ್ರಾಪ್ತೆಯು ಒಂದು ರಾತ್ರಿ ತಂಗಿದ್ದ ಹಿನ್ನೆಲೆಯಲ್ಲಿ ಯುವಕನ ಮನೆಯವರ ಮೇಲೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ನಂಜನಗೂಡು ತಾಲೂಕಿನ ಮಾದಾಪುರ ಗ್ರಾಮದ ಮಂಜುನಾಥ್ ಹಾಗೂ ಅಪ್ರಾಪ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಯುವತಿಯ ಮನೆಯವರು ಮತ್ತೊಬ್ಬ ಹುಡುಗನ ಜತೆ ವಿವಾಹ ಮಾಡಲು ಸಿದ್ದತೆ ನಡೆಸಿದ್ದರು. ಈ ಕಾರಣದಿಂದಾಗಿ ಯುವತಿ ತನ್ನ ಪ್ರಿಯಕರನ ಮನೆಗೆ ಹೋಗಿ, ಅಲ್ಲೇ ರಾತ್ರಿ ತಂಗಿದ್ದಾಳೆ.
ಆದರೆ ಯುವತಿಯ ಪೋಷಕರು ಮಂಜುನಾಥ್ ಮೇಲೆ ಅಪಹರಣ ಆರೋಪ ಮಾಡಿದ್ದು, ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





