ಫೆ.17: ದಾವಣಗೆರೆ, ಸುಳ್ಯದಲ್ಲಿ ಪಿಎಫ್‌ಐ ಸಾರ್ವಜನಿಕ ಸಭೆ
ಮಂಗಳೂರು, ಫೆ.13: ಸಾಮಾಜಿಕ ರಂಗಗಳಲ್ಲಿ ಸಕ್ರಿಯವಾಗಿರುವ ಪಿಎಫ್‌ಐ ತನ್ನ 11ನೆ ವರ್ಷಾಚರಣೆಯನ್ನು ದೇಶದಾದ್ಯಂತ ಆಚರಿಸುತ್ತಿದೆ. ನಾಗರಿಕರ ಮಧ್ಯೆ ಸಾಮಾಜಿಕ ನ್ಯಾಯದ ಪ್ರಜ್ಞೆಯನ್ನು ಮೂಡಿಸಿ ಸಮಗ್ರ ಸಬಲೀಕರಣದ ಅಜೆಂಡಾದೊಂದಿಗೆ ಕಾರ್ಯಾಚರಿಸುತ್ತಿರುವ ಪಿಎಫ್‌ಐ ತನ್ನ 11ನೆ ವರ್ಷಾಚರಣೆಯ ಸಂದರ್ಭ ಫೆ.17ರಂದು ದಾವಣಗೆರೆ ಮತ್ತು ಸುಳ್ಯದಲ್ಲಿ ಯುನಿಟಿ ಮಾರ್ಚ್ ಹಮ್ಮಿಕೊಂಡಿವೆ.
ಈ ಕಾರ್ಯಕ್ರಮದ ಅಂಗವಾಗಿ ಸಂಘಟನೆಯ ಸ್ಥಳೀಯ ಘಟಕಗಳು ಮನೆ ಮನೆಗೆ ಭೇಟಿ ನೀಡಿ ‘ನಾವು ಜನರೊಂದಿಗೆ - ಜನರು ನಮ್ಮೊಂದಿಗೆ’ ಎಂಬ ಸಾರ್ವಜನಿಕ ಸಂಪರ್ಕ ಅಭಿಯಾನವನ್ನು ಕೈಗೊಂಡಿವೆ. ಈ ಪ್ರಯುಕ್ತ ಪಾಪ್ಯುಲರ್ ಫ್ರಂಟ್‌ನ ಪ್ರತಿನಿಧಿಗಳು 23 ರಾಜ್ಯಗಳಾದ್ಯಂತ ಸುಮಾರು 5 ದಶಲಕ್ಷ ಮಂದಿಯನ್ನು ಭೇಟಿಯಾಗಿದ್ದಾರೆ. ಅದರೊಂದಿಗೆ ಸಮಾಜ ಸೇವಾ ಕಾರ್ಯಚಟುವಟಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಅಭಿಯಾನಗಳು ನಡೆದಿದೆ.
ಈ ಬಾರಿಯೂ ಸಂಘಟನೆಯು ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮ್ಮಿಕೊಂಡಿದೆ. ಈ ಪ್ರಯುಕ್ತ ಯೂನಿಟ್ ಮಟ್ಟದಲ್ಲಿ ಧ್ವಜಾರೋಹಣ ಮತ್ತು ಜನಸಂಪರ್ಕ ಸಭೆಗಳನ್ನು ಏರ್ಪಡಿಸಿವೆ ಎಂದು ಪಿಎಫ್‌ಐ ರಾಜ್ಯ ಮಾಧ್ಯಮ ಸಂಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





