ಗಾಂಜಾ ಸೇವನೆ: ನಾಲ್ವರ ಸೆರೆ
ಮಂಗಳೂರು, ಫೆ.13: ನಗರದ ಆಕಾಶಭವನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ಕು ಮಂದಿ ಯುವಕರನ್ನು ಕಾವೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಆಕಾಶ್‌ಭವನದ ಭರತ್ (18), ಅಶ್ವಿನ್ (19), ನಿಖಿಲ್ (20) ಹಾಗೂ ಗಾಂಧಿನಗರದ ರಾಮಕೃಷ್ಣ (18) ಬಂಧಿತ ಆರೋಪಿಗಳು. ಇವರು ಆಕಾಶಭವನದ ಜಲ್ಲಿಗುಡ್ಡೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಪೊಲೀಸರು ಬಂಧಿಸಿದರು. ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಕಾನೂನು ಕ್ರಮ ಜರಗಿಸಿದರು.
ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಆರ್. ನಾಯ್ಕೆ, ಎಚ್‌ಸಿ ವಿಶ್ವನಾಥ್, ರಾಜಶೇಖರ್, ಪ್ರಮೋದ್ ಪಾಲ್ಗೊಂಡಿದ್ದರು.
Next Story





