ಸರಕಾರದಿಂದ ಬಹಮನಿ ಸುಲ್ತಾನರ ಉತ್ಸವವಿಲ್ಲ: ಸಿದ್ದರಾಮಯ್ಯ ಸ್ಪಷ್ಟಣೆ

ಬೆಂಗಳೂರು, ಫೆ.14: ಬಹಮನಿ ಸುಲ್ತಾನರ ಉತ್ಸವದ ಬಗ್ಗೆ ನನಗೇನೂ ಗೊತ್ತಿಲ್ಲ. ರಾಜ್ಯ ಸರಕಾರದಿಂದ ಉತ್ಸವ ಆಚರಣೆ ಮಾಡುವ ಯಾವ ತೀರ್ಮಾನವೂ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಬಹಮನಿ ಸುಲ್ತಾನರ ಉತ್ಸವ ಆಚರಣೆ ಕುರಿತು ಸಚಿವ ಶರಣಪ್ರಕಾಶ್ ಪಾಟೀಲ್ ನೀಡಿರುವ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಬಹಮನಿ ಉತ್ಸವ ಆಚರಣೆಗೆ ಸರಕಾರದಿಂದ 30 ಕೋಟಿ ರೂ.ನೀಡಲಾಗುತ್ತಿದೆ ಎಂಬುದು ಸುಳ್ಳು ಎಂದು ಮುಖ್ಯಮಂತ್ರಿ ಹೇಳಿದರು.
ಬಹಮನಿ ಉತ್ಸವದ ಪ್ರಸ್ತಾವನೆ ಇಲ್ಲ
ಬಹಮನಿ ಉತ್ಸವ ಆಚರಣೆಯ ಕುರಿತು ಯಾವುದೇ ಪ್ರಸ್ತಾವನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಂದೆ ಇಲ್ಲ. ಈ ವಿಚಾರವಾಗಿ ಮಾಧ್ಯಮಗಳಲ್ಲಿ ಬಂದ ವರದಿಯನ್ನು ನಾನು ಗಮನಿಸಿದ್ದೇನೆ. ಇಲಾಖೆಯಿಂದ ಬಹಮನಿ ಉತ್ಸವ ಆಚರಣೆಗೆ ಆದೇಶ ಹೊರಡಿಸಿಲ್ಲ ಹಾಗೂ ಯಾವುದೇ ಹಣ ಬಿಡುಗಡೆ ಮಾಡಲಾಗಿಲ್ಲ. ಈ ಕುರಿತು ಪ್ರಸ್ತಾವ ಬಂದಿಲ್ಲ.-ಸಚಿವೆ ಉಮಾಶ್ರೀ
Next Story







