ಐಟಿ ದಾಳಿ ಪ್ರಕರಣ: ಡಿಕೆಶಿ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಧೀಶರ ಅನುಮತಿ

ಬೆಂಗಳೂರು, ಫೆ.14: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಆರ್ಥಿಕ ಅಪರಾಧಗಳ ಘಟಕದ ನ್ಯಾಯಾಧೀಶರು ಅನುಮತಿ ನೀಡಿದ್ದಾರೆ.
ಕೆಲವು ತಿಂಗಳ ಹಿಂದೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ವೇಳೆ ಕೋಟ್ಯಂತರ ಮೊತ್ತದ ದಾಖಲೆ ಇಲ್ಲದ ಆಸ್ತಿ ಪತ್ತೆಯಾಗಿತ್ತು. ದಾಖಲೆಗಳನ್ನ ನಾಶ ಮಾಡಿದ ಆರೋಪದ ಮೇಲೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಮಾರ್ಚ್ 22ರ ಒಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕು. ಕೋರ್ಟ್‌ಗೆ ಹಾಜರಾಗದಿದ್ದರೆ ಬಂಧನ ಸಾಧ್ಯತೆಯಿದೆ. ನ್ಯಾಯಾಧೀಶರೇ ಅನುಮತಿ ನೀಡಿರುವುದರಿಂದ ಸಚಿವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಆರ್ಥಿಕ ಅಪರಾಧಗಳ ಘಟಕದ ನ್ಯಾಯಾಧೀಶರಾದ ಶಾಂತಪ್ಪಆಳ್ವ ಅನುಮತಿ ನೀಡಿದ್ದಾರೆ. ಐಟಿ ದಾಳಿಯ ವೇಳೆ ಸಚಿವರು ಕೆಲವು ಮಹತ್ವದ ಮಾಹಿತಿಯುಳ್ಳ ಕಾಗದಗಳನ್ನು ಹರಿದು ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ.
Next Story





