ಆಸ್ಪತ್ರೆಗಳಲ್ಲಿ ಮಾಹಿತಿ ಪ್ರಕಟಿಸಿ
ಮಾನ್ಯರೇ,
ಬೆಂಗಳೂರು ಬಸವೇಶ್ವರ ನಗರದಲ್ಲಿರುವ ಹೋಮಿಯೋಪಥಿ ಹಾಗೂ ರಾಜ್ಯದಲ್ಲಿರುವ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ನೀಡಲಾಗುವ ಚಿಕಿತ್ಸೆ ಹಾಗೂ ಚಿಕಿತ್ಸಾ ವಿಭಾಗಗಳು, ಪ್ರಯೋಗಾಲಯದಲ್ಲಿ ನಡೆಸಲಾಗುವ ತಪಾಸಣೆಗಳು ಹಾಗೂ ಇತರ ಉಪಯುಕ್ತ ಮಾಹಿತಿಗಳನ್ನು ಜನರಿಗೆ ಕಾಣುವಂತೆ ಪ್ರಕಟಿಸಬೇಕಾಗಿದೆ. ಅಲ್ಲದೆ ಸಲಹೆ ಸೂಚನೆಗಳನ್ನು ನೀಡಲು ಅಧಿಕಾರಿಗಳ ಹುದ್ದೆ, ವಿಳಾಸ, ಸಂಪರ್ಕ ಸಂಖ್ಯೆ, ಮಿಂಚಂಚೆ (ಇ-ಮೇಲ್) ಇನ್ನಿತರ ಮಾಹಿತಿಗಳನ್ನೂ ವಿವರವಾಗಿ ಪ್ರಕಟಿಸಿದರೆ ಚಿಕಿತ್ಸೆಗಾಗಿ ಆಗಮಿಸುವವರ ಗೊಂದಲ ಪರಿಹಾರವಾಗುತ್ತದೆ.
ಚಂದ್ರಶೇಖರ, ಬೆಂಗಳೂರು
Next Story