ಮಂಗಳೂರು: ಕ್ವಾಟ್ರಸ್ ನಲ್ಲಿ ಬೆಂಕಿ ಅವಘಡ

ಸಾಂದರ್ಭಿಕ ಚಿತ್ರ
ಮಂಗಳೂರು, ಫೆ. 16: ಮಂಗಳೂರಿನ ಡಿ ಸಿ ಬಂಗ್ಲೆಯ ಆವರಣದಲ್ಲಿರುವ ಕ್ವಾಟ್ರಸ್ ಒಂದರಲ್ಲಿ ಶುಕ್ರವಾರ ಬೆಳಗ್ಗೆ ಬೆಂಕಿ ಅವಘಡ ಉಂಟಾಗಿದೆ.
ಡಿಸಿ ಮನೆ ಸಿಬ್ಬಂದಿ ವಾಸವಿರುವ ಕ್ವಾಟ್ರಸ್ ನಲ್ಲಿ ಬೆಂಕಿ ಅವಘಡ ಸಂಭವಿಸಿರುವುದಾಗಿ ತಿಳಿದುಬಂದಿದೆ.
ಬೆಂಕಿ ಅಪಘಡ ಉಂಟಾದ ವಸತಿಗೃಹದಲ್ಲಿ ಎಲ್ಲಪ್ಪ ಮಂಗಳಗಟ್ಟಿ ಎಂಬವರು ವಾಸವಿದ್ದರು. ಬೆಂಕಿ ಅಪಘಡದಿಂದ ಮನೆಯಲ್ಲಿದ್ದ ಕಪಾಟು, ಮಂಚ ಸೇರಿದಂತೆ ಹಲವು ವಸ್ತುಗಳು ನಾಶವಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ಅರಿತ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story





