Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು...

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕೆ ವಿದೇಶದ ವಿಶ್ವವಿದ್ಯಾಲಯಕ್ಕೆ ಕಳುಹಿಸುವ ಗುರಿ

ಮಂಗಳೂರಿನಲ್ಲಿ 85 ಕೋ.ರೂ. ವೆಚ್ಚದಲ್ಲಿ ಅತ್ಯುನ್ನತ ಭದ್ರತಾ ಕಾರಾಗೃಹ ನಿರ್ಮಾಣ

ವಾರ್ತಾಭಾರತಿವಾರ್ತಾಭಾರತಿ16 Feb 2018 12:00 PM IST
share
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕೆ ವಿದೇಶದ ವಿಶ್ವವಿದ್ಯಾಲಯಕ್ಕೆ ಕಳುಹಿಸುವ ಗುರಿ

ಬೆಂಗಳೂರು,ಫೆ.16: ಕೃಷಿಗೆ 5080 ಕೋಟಿ ರೂ , ಸಣ್ಣ ನೀರಾವರಿಗೆ 2090 ಕೋಟಿ ರೂ, ಮೀನುಗಾರಿಗೆ 337 ಕೋಟಿ ರೂ, ಸಹಕಾರಿ ಕ್ಷೇತ್ರ 1663 ಕೋಟಿ ರೂ, ಜಲಸಂಪನ್ಮೂಲ ಇಲಾಖೆಗೆ  15, 929ಕೋಟಿ ರೂ, ರೇಷ್ಮೇ ಇಲಾಖೆಗೆ 429 ಕೋಟಿ ರೂ. ತೋಟಗಾರಿಕೆ 1091 ಕೋಟಿ ರೂ. ಕೃಷಿಭಾಗ್ಯ 600 ಕೋಟಿ ರೂ.ಅನುದಾನ ನಿಗದಿಪಡಿಸಿ  2018-19ನೇ ಸಾಲಿನ ಬಜೆಟ್ ನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಇಂದು ಮಂಡಿಸಿದರು.

ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು  ನಮ್ಮದು ರೈತ ಸ್ನೇಹಿ ಸರ್ಕಾರವಾಗಿದೆ. ರಾಜ್ಯದ ಪ್ರತಿಯೊಬ್ಬ ತೆರಿಗೆದಾರನಿಗೂ ಲೆಕ್ಕ ಒಪ್ಪಿಸುವ ಜವಾಬ್ದಾರಿ  ನನಗಿದೆ. ಅಯವ್ಯಯವೆಂದರೆ ಅಂಕಿಅಂಶಗಳ ಕಸರತ್ತಲ್ಲ. ಗುರಿ ಸಾಧನೆಯ ಮಾರ್ಗವಾಗಿದೆ ಎಂದು ಪರಿಗಣಿಸುತ್ತೇನೆ ಎಂದರು.

ಕೃಷಿ, ಹೈನುಗಾರಿಕೆಯಲ್ಲಿ ನಾವು ಮುಂದಿದ್ದೇವೆ. ನಾನು ರೈತನ ಮಗ. ರೈತನ ಬವಣೆಯ ಅರಿವು ನನಗಿದೆ. ರೈತರ ಸಂಕಷ್ಟವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ ಎಂದರು.

13ನೇ ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ದೇವರಾಜ ಅರಸು ದಾಖಲೆಯನ್ನು ಮುರಿದರು. 14 ನೇ ವಿಧಾನಸಭೆಯ ಕೊನೆಯ ಅಧಿವೇಶನಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂದರು.

ಹೈಲೈಟ್ಸ್

*ಪ್ರಾಥಮಿಕ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದು ನಿಧನರಾದವರ 1 ಲಕ್ಷ ರೂ. ತನಕ ಮನ್ನಾ.

* ಸಾವಯವ ಕೃಷಿಗೆ ಆಧ್ಯತೆ

*ರೈತರಿಗೆ ನೇರ ಪ್ರಯೋಜನದ ರೈತ ಬೆಳಕು ಯೋಜನೆ. 70 ಲಕ್ಷ ರೈತರಿಗೆ ರೈತ ಬೆಳಕು ಯೋಜನೆಯಿಂದ ಪ್ರಯೋಜನ.

*ಚಿಕ್ಕಮಗಳೂರಿನಲ್ಲಿ  ಕುವೆಂಪು ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರ 

*ಕಬ್ಬು ಕಟಾವು ಯಂತ್ರಗಳಿಗೆ  ಸಹಾಯಧನ 

*ರಾಜ್ಯದ ಎಲ್ಲ  ವಿದ್ಯಾರ್ಥಿಗಳಿಗೆ  ಉಚಿತ ಬಸ್ ಪಾಸ್ ಸೌಲಭ್ಯ. 19.60 ಲಕ್ಷ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ

*ಸಿರಿಧಾನ್ಯ ಬೆಳೆಗಳ ಯೋಜನೆ 60 ಸಾವಿರ ಹೆಕ್ಟರ್ ಗೆ ಹೆಚ್ಚಳ.

* ಹಾವು ಕಡಿತದಿಂದ ಮೃತಪಟ್ಟ ರೈತರಿಗೆ 2 ಲಕ್ಷ ರೂ.ಪರಿಹಾರ

* 10 ಡಬಲ್ ಡಕ್ಕರ್ ಬಸ್ ಗಳ  ಖರೀದಿಗೆ ಯೋಜನೆ

*ಕುರಿ, ಮೇಕೆ ಸಾಕಾಣಿಕೆದಾರರ ಸಾಲ ಮನ್ನಾ.

* 16 ಜಿಲ್ಲೆಗಳಲ್ಲಿ ಕುರಿ ರೋಗ ತಪಾಸಣಾ ಕೇಂದ್ರ 

*ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ 1000 ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ.

*ರಾಜ್ಯದಲ್ಲಿ ಕುರಿ, ಆಡು ಸಾಕಾಣಿಕೆ ಹೆಚ್ಚಿನ ಆದ್ಯತೆ.

* ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ.

* ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತನ ಕುಟುಂಬಕ್ಕೆ ಮಾಧ್ಯಮ ಸಂಜೀವಿನಿ ಜೀವವಿಮಾ ಯೋಜನೆಯಡಿ 5 ಲಕ್ಷ ರೂ ಪರಿಹಾರ.  ಪತ್ರಕರ್ತರ ಭವನ ನಿರ್ಮಾಣಕ್ಕೆ 5 ಕೋಟಿ ರೂ.

*ಸರಕಾರಿ ನೌಕರರಿಗೆ ಬಂಪರ್  6ನೇ ವೇತನ ಆಯೋಗದ ಜಾರಿ.

*ಸರಕಾರ  ಮನೆ, ಮನೆಗಳಿಗೆ ಪತ್ರಿಕೆ ಹಂಚುವವರ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂ. ಕ್ಷೇಮ ನಿಧಿ.

*ವೃದ್ಯಾಪ್ಯ ವೇತನ, ವಿಧವಾ, ನಿರ್ಗತಿಕ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಪಿಂಚಿಣಿ 500ರಿಂದ 600 ರೂ.ಗೆ ಏರಿಕೆ.

*ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆಗೆ 2 ಕೋಟಿ ರೂ.

*2018-19ರಲ್ಲಿ 100 ಸಂಯೋಜಿತ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ

*ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಂತಹಂತವಾಗಿ ಸಿಸಿಟಿವಿ.

*ಕರ್ನಾಟಕ ವಿವಿಯಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ಕೊಂಕಣಿ ಅಧ್ಯಯನ ಪೀಠ.

*ಗ್ರಾಮಿಣ  ಆರೋಗ್ಯ ಸುಧಾರಣೆಗೆ  ಆರೋಗ್ಯ ಕರ್ನಾಟಕ 2018 ಯೋಜನೆ ಜಾರಿ. 9000 ಆರೋಗ್ಯ ಮತ್ತು ಸೌಖ್ಯ ಕೇಂದ್ರ ಸ್ಥಾಪನೆ

* ಕೂಲಿ ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ 10 ಕೋ.ರೂ. ವೆಚ್ಚದಲ್ಲಿ 100 ಸರಕಾರಿ ಸಂಚಾರಿ ಅಂಗನವಾಡಿ ಸ್ಥಾಪನೆಗೆ ಯೋಜನೆ.

*ಹಲಸೂರು, ಸ್ಯಾಂಕಿ ಸಹಿತ ಬೆಂಗಳೂರಿನ 40 ಕೆರೆಗಳನ್ನು ಪಾಲಿಕೆ ವತಿಯಿಂದ ಅಭಿವೃದ್ಧಿ

 * ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಇಲಾಖೆಗೆ 247 ಕೋ.ರೂ. ಅನುದಾನ

*2018-19ರಲ್ಲಿ 2,500 ಗ್ರಾಮಗಳು ಪೋಡಿಮುಕ್ತ

*ಕ್ರೈಸ್ತ ಸಮುದಾಯದ ಅಭಿವೃದ್ದಿಗೆ 200 ಕೋ.ರೂ. ಅನುದಾನ

*ಜೈನ ಹಾಗೂ ಸಿಖ್ ಸಮುದಾಯದ ಅಭಿವೃದ್ಧಿಗೆ 80 ಕೋ.ರೂ.

*ಕೆನೆ ಪದರ ಆದಾಯ ಮಿತಿ 6 ರಿಂದ 8 ಲಕ್ಷ ರೂ.ಗೆ ಏರಿಕೆ

*ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ 8 ಜಂಕ್ಷನ್‌ಗಳಲ್ಲಿ ಗ್ರೇಡ್ ಸಪರೇಟರ್ ಸ್ಥಾಪನೆ

*25 ಹೊಸ ಮೊರಾರ್ಜಿ ದೇಸಾಯಿ ವಸತಿ ಶಾಲೆ, 5 ಹೊಸ ಪದವಿ ಪೂರ್ವ ಮಹಿಳಾ ವಸತಿ ಕಾಲೇಜು ಸ್ಥಾಪನೆ.

*4 ಬಿಎಡ್, ಡಿಎಡ್ ಕಾಲೇಜುಗಳ ಸ್ಥಾಪನೆ

*ದಿ ಬ್ಯಾರಿ ವೆಲ್ಫೇರ್ ಅಸೋಸಿಯೇಶನ್‌ಗೆ 2 ಕೋ.ರೂ. ಅನುದಾನ

*ಅಝೀಝ್ ಸೇಠ್ ಸ್ಮಾರಕ ಸಮುದಾಯ ಭವನ ನಿರ್ಮಾಣಕ್ಕೆ 3 ಕೋ.ರೂ.

*ಅಲ್ಪ ಸಂಖ್ಯಾತ ಕಲ್ಯಾಣ ಯೋಜನೆ ಅಡಿ 2281 ಕೋ.ರೂ. ಅನುದಾನ

*ಮುಂದಿನ 5 ವರ್ಷಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 20 ಲಕ್ಷ ಮನೆ ನಿರ್ಮಾಣ

*ಸ್ಮಾರ್ಟ್ ಸಿಟಿಗೆ ಕೇಂದ್ರದಿಂದ 500 ಕೋ.ರೂ., ರಾಜ್ಯದಿಂದ 500 ಕೋ.ರೂ.ಅನುದಾನ

*ಬಿಎಡ್ ಡಿಎಡ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 25 ಸಾವಿರ ವಿದ್ಯಾರ್ಥಿವೇತನ

*ಮೀನುಗಾರಿಕೆ ಇಲಾಖೆಗೆ ಒಟ್ಟು 252 ಕೋ.ರೂ. ಅನುದಾನ

*ಗ್ರಾಮೀಣಾಭಿವೃದ್ದಿ ಹಾಗೂ ಪಂಜಾಯತ್‌ರಾಜ್ ಇಲಾಖೆಗೆ 14,268 ಕೋ.ರೂ.

*ಸಮಾಜಕಲ್ಯಾಣ ಇಲಾಖೆ 11,821 ಕೋ.ರೂ.

*ಕಂದಾಯ ಇಲಾಖೆಗೆ 6,642 ಕೋ.ರೂ.

*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5,371 ಕೋ.ರೂ.

*ವಸತಿ ಇಲಾಖೆಗೆ 3,942 ಕೋ.ರೂ.

*ಪೊಲೀಸ್ ನೇಮಕಾತಿಗೆ ಶಾಶ್ವತ ನೇಮಕಾತಿ ಮಂಡಳಿ ರಚನೆ

*ಕರಾವಳಿ ಅಭಿವೃದ್ಧಿ ಮಂಡಳಿಗೆ 25 ಕೋ.ರೂ.

*ಮಲೆನಾಡು ಅಭಿವೃದ್ಧಿ ಮಂಡಳಿಗೆ 70 ಕೋ.ರೂ.

*ಶಾಸಕರ ಸ್ಥಳೀಯ ಅಭಿವೃದ್ದಿ ಯೋಜನೆಗೆ 600 ಕೋ.ರೂ.

 *ಮಂಗಳೂರಿನಲ್ಲಿ 85 ಕೋ.ರೂ. ವೆಚ್ಚದಲ್ಲಿ ಅತ್ಯುನ್ನತ ಭದ್ರತಾ ಕಾರಾಗೃಹ ನಿರ್ಮಾಣ, ಎಲ್ಲ ಜಿಲ್ಲಾ ಕಾರಾಗೃಹಗಳಲ್ಲಿ ವಿಡಿಯೋ ಲಿಂಕಿಂಗ್ ವ್ಯವಸ್ಥೆ.

*ಕರಾವಳಿಯಲ್ಲಿ ತೇಲುವ ಉಪಾಹಾರಗೃಹ ,ಹೌಸ್ ಬೋಟ್, ಆಯ್ದು ಪ್ರವಾಸಿ ತಾಣಗಳಲ್ಲಿ ಲಭ್ಯ.

*ಪೊಲೀಸ್ ಇಲಾಖೆಯಲ್ಲಿ ಶೇ.25ರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ.

*ಸಾಲು ಮರದ ತಿಮ್ಮಕ್ಕ ಯೋಜನೆಗೆ ಅನುದಾನ

*ರೇಷ್ಮೆ ಟೂರಿಸಂಗೆ ಚೆನ್ನಪಟ್ಟಣದಲ್ಲಿ ಲೈವ್ ಮ್ಯೂಸಿಯಂ

*ಮುಂದಿನ 5 ವರ್ಷಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಅಗ್ನಿ ಶಾಮಕ ಠಾಣೆ

*ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಹೆಚ್ಚಳ. ಎಸ್‌ಸಿ ಯುವತಿಯರಿಗೆ 3 ಲಕ್ಷದಿಂದ 5 ಲಕ್ಷ ರೂ.ಗೆ, ಎಸ್‌ಸಿ ಯುವಕರಿಗೆ 2 ಲಕ್ಷದಿಂದ ಮೂರು ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.

*ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರ ಸ್ವಯಂ ಉದ್ಯೋಗಕ್ಕಾಗಿ 10 ಲಕ್ಷ ರೂ. ವರೆಗೆ ಸಾಲ. ವಾರ್ಷಿಕ ಶೇ.6ರಷ್ಟು ಬಡ್ಡಿ ದರ.

*ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕೆ ವಿದೇಶದ ವಿಶ್ವವಿದ್ಯಾಲಯಕ್ಕೆ ಕಳುಹಿಸುವ ಗುರಿ. 2018-19ರಲ್ಲಿ 150 ವಿದ್ಯಾರ್ಥಿಗಳು ಆಯ್ಕೆ.

*ಮುಖ್ಯಮಂತ್ರಿ ಅನಿಲ ಯೋಜನೆಯಲ್ಲಿ  ಉಚಿತ ಗ್ಯಾಸ್ ಸಂಪರ್ಕ:  30 ಲಕ್ಷ ಫಲಾನುಭವಿಗಳಿಗೆ 1350 ಕೋಟಿ ವೆಚ್ಚದಲ್ಲಿ ಉಚಿತ ಗ್ಯಾಸ್ 2 ಬರ್ನರ್ ಇರುವ  ಗ್ಯಾಸ್ ಸ್ಟವ್, 2 ರೀಫಿಲ್ ಸಿಲಿಂಡರ್ ವಿತರಣೆ. 

*ನ್ಯಾಯಬೆಲೆ  ಅಂಗಡಿ ಮಾಲೀಕರಿಗೆ ಮಾರಾಟದ ಕಮಿಷನ್ ಕ್ವಿಂಟಲ್‌ಗೆ 100 ರೂ. ಹೆಚ್ಚಳ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕೊಡುಗೆ.

*ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿಗೆ ಶಾಶ್ವತ ಪೊಲೀಸ್ ಸೇವೆಗಳ ನೇಮಕಾತಿ ಮಂಡಳಿ ರಚನೆ.

*ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಮನೆ ನಿರ್ಮಾಣ. ವಸತಿ ಇಲಾಖೆಗೆ 3942 ಕೋಟಿ ಅನುದಾನ,

*ಬೆಂಗಳೂರಿನಲ್ಲಿ  ಬಹುಮಹಡಿ ಕಟ್ಟಡ ನಿರ್ಮಾಣ, ರಾಜ್ಯದ ಎಲ್ಲ ನಗರಗಳಿಗೆ ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ ವಿಸ್ತರಣೆ.

*ಹವಾಮಾನ ಮುನ್ಸೂಚನೆ ಮತ್ತು ಸಿಡಿಲು ಮುನ್ನೆಚ್ಚರಿಕೆ ನೀಡಲು ಮೊಬೈಲ್ ಆ್ಯಪ್ ಅಭಿವೃದ್ಧಿ.

*ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ವರ್ಷಾಶನ ಮಾಡಲು 20 ಕೋಟಿ ರೂ.

*ರಾಜ್ಯ ವಕ್ಫ್ ಪರಿಷತ್ ಕಾರ್ಪಸ್ ಫಂಡ್‌ಗೆ 20 ಕೋಟಿ ರೂ. ಅನುದಾನ

*ಮದ್ರಸಗಳ  ಆಧುನೀಕರಣ, ಮೂಲಸೌಕರ್ಯಕ್ಕೆ 15 ಕೋಟಿ ರೂ.

*ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರಿಗೆ ಸಾಲ,

*15 ಕೋಟಿ ರೂ. ವೆಚ್ಚದಲ್ಲಿ ಸ್ಟಾರ್ಟ್ ಅಪ್ ಸಾಲ ಯೋಜನೆ ಜಾರಿ

*ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಅಲ್ಪಸಂಖ್ಯಾತರ ಅಧ್ಯಯನ ಪೀಠ ಸ್ಥಾಪನೆ

*ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ 267 ಕೋಟಿ ರೂ.

*ಸವಿತಾ ಸಮಾಜ,  ಮಡಿವಾಳ, ಕುಂಬಾರರ ಜನಾಂಗದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ.

*ಒಬಿಸಿ ಕೆನೆ ಪದರ ಆದಾಯ ಮಿತಿ 6ರಿಂದ 8 ಲಕ್ಷ ರೂ.ಗೆ ಹೆಚ್ಚಳಕ್ಕೆ ಕ್ರಮ

*ಬೆಂಗಳೂರು ಕಾರಾಗೃಹದಲ್ಲಿ ಅತ್ಯುನ್ನತ ಮಟ್ಟದ ಭದ್ರತೆಗೆ 100 ಕೋಟಿ ರೂ.

*ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪನೆ.

ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಿರ್ಭಯ ಕೇಂದ್ರ ಸ್ಥಾಪನೆ.

*ಪೊಲೀಸ್‌ ಸ್ಮಾರಕ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ

*ಬೆಂಗಳೂರು ಮೆಟ್ರೋ: 266 ಕಿ.ಮೀ ಮೆಟ್ರೋ ಮಾರ್ಗ ವಿಸ್ತರಣೆ .

*ಜೆ.ಪಿನಗರದಿಂದ ಹೆಬ್ಬಾಳದ ಮೂಲಕ ಕೆ.ಆರ್‌ಪುರಂಗೆ  ಮೆಟ್ರೋ ಮಾರ್ಗ ವಿಸ್ತರಣೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X