ಕುತ್ತಾರು: ಬಾವಿಗೆ ಬಿದ್ದು ಕಾರ್ಮಿಕನಿಗೆ ಗಾಯ

ಸಾಂದರ್ಭಿಕ ಚಿತ್ರ
ಕೊಣಾಜೆ, ಫೆ. 16: ಕುತ್ತಾರಿನ ಅಗೇಲ ಎಂಬಲ್ಲಿ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬಗಂಬಿಲ ನಿವಾಸಿ ವಿಲ್ಫ್ರೆಡ್ (60) ಗಾಯಗೊಂಡವರು ಎಂದು ತಿಳಿದುಬಂದಿದೆ.
ಕುತ್ತಾರು ಅಗೇಲ ನಿವಾಸಿಯೋರ್ವರ ಬಾವಿಯಲ್ಲಿ ಇಬ್ಬರು ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಬಾವಿಯೊಳಗಿದ್ದ ವಿಲ್ಫ್ರೆಡ್ ಏಣಿ ಮೂಲಕ ಮೇಲೇರುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದು, ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





