Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಮಧುಮೇಹದಿಂದ ಕಾಯಂ ದೂರವಿರಲು ಮಾರ್ಗಗಳು...

ಮಧುಮೇಹದಿಂದ ಕಾಯಂ ದೂರವಿರಲು ಮಾರ್ಗಗಳು ಇಲ್ಲಿವೆ

ವಾರ್ತಾಭಾರತಿವಾರ್ತಾಭಾರತಿ16 Feb 2018 4:27 PM IST
share
ಮಧುಮೇಹದಿಂದ ಕಾಯಂ ದೂರವಿರಲು ಮಾರ್ಗಗಳು ಇಲ್ಲಿವೆ

ವಿಶ್ವಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. 2014ರಲ್ಲಿ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ 1980ರಲ್ಲಿ 108 ಮಿ.ಇದ್ದ ಮಧುಮೇಹಿಗಳ ಸಂಖ್ಯೆ 34 ವರ್ಷಗಳಲ್ಲಿ 422 ಮಿ.ಗೆ ಏರಿಕೆಯಾಗಿದೆ.

ನಮ್ಮ ಚಯಾಪಚಯ ವ್ಯವಸ್ಥೆಯಲ್ಲಿನ ಏರುಪೇರುಗಳು ಮಧುಮೇಹಕ್ಕೆ ಆಹ್ವಾನವನ್ನು ನೀಡುತ್ತವೆ. ಸಾಕಷ್ಟು ಇನ್ಸುಲಿನ್‌ನ್ನು ಉತ್ಪಾದಿಸಲು ನಮ್ಮ ಶರೀರವು ವಿಫಲಗೊಂಡಾಗ ಅಥವಾ ಅದನ್ನು ತಿರಸ್ಕರಿಸಿದಾಗ ರಕ್ತದಲ್ಲಿಯ ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತ ತೀರ ಹೆಚ್ಚಾಗುತ್ತದೆ ಮತ್ತು ಈ ಸ್ಥಿತಿಯನ್ನು ಮಧುಮೇಹ ಎಂದು ನಾವು ಕರೆಯುತ್ತೇವೆ. ರಕ್ತದಲ್ಲಿಯ ಸಕ್ಕರೆಯ ಮಟ್ಟವು ತುಂಬ ಹೆಚ್ಚಾದಾಗ ದಣಿವು, ಪದೇಪದೇ ಮೂತ್ರವಿಸರ್ಜನೆ, ರೋಗ ನಿರೋಧಕ ಶಕ್ತಿಯ ಕ್ಷೀಣಿಸುವಿಕೆ, ಗಾಯಗಳ ನಿಧಾನ ಮಾಯುವಿಕೆ ಇತ್ಯಾದಿಗಳಂತಹ ಮಧುಮೇಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಧುಮೇಹವನ್ನು ಗುಣಪಡಿಸಲು ಸಾಧ್ಯವಿಲ್ಲ, ಆದರೆ ಮಧುಮೇಹಿಗಳು ಸೂಕ್ತ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಔಷಧಿಗಳಿಂದ ಅದನ್ನು ನಿಯಂತ್ರಣ ದಲ್ಲಿರಿಸಬಹುದು ಮತ್ತು ಇತರರಂತೆ ಸಾಮಾನ್ಯ ಜೀವನವನ್ನು ನಡೆಸಬಹುದು.

ನಿಮ್ಮ ಕುಟುಂಬದಲ್ಲಿ ಯಾರಾದರೂ ಮಧುಮೇಹಿಗಳಾಗಿದ್ದ ಇತಿಹಾಸವಿಲ್ಲದಿದ್ದರೆ ಈ ರೋಗವೆಂದೂ ಬಾರದಂತಿರಲು ಅನುಸರಿಸಬಹುದಾದ ಕೆಲವು ಸಿದ್ಧಮಾರ್ಗಗಳ ಕುರಿತು ಮಾಹಿತಿಗಳು ಇಲ್ಲಿವೆ.....

► ಆರೋಗ್ಯಕರ ಬಿಎಂಐ ಕಾಯ್ದುಕೊಳ್ಳುವಿಕೆ

ಆರೋಗ್ಯಕರ ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ಶರೀರ ದ್ರವ್ಯರಾಶಿ ಸೂಚ್ಯಂಕ ವನ್ನು ಕಾಯ್ದುಕೊಳ್ಳುವುದು ಮಧುಮೇಹ ಸೇರಿದಂತೆ ಹಲವಾರು ಕಾಯಿಲೆಗಳನ್ನು ತಡೆಯಲು ಮತ್ತು ಅವುಗಳ ಚಿಕಿತ್ಸೆಗೆ ಅತ್ಯುತ್ತಮ ಮಾರ್ಗಗಳಲ್ಲೊಂದಾಗಿದೆ. ಆರೋಗ್ಯಕರ ಬಿಎಂಐ ಹೊಂದಿರಲು ವ್ಯಕ್ತಿಯು ತನ್ನ ಜೀವನಶೈಲಿಯಲ್ಲಿ ಬದಲಾವಣೆಗಳ ಮೂಲಕ ಅಗತ್ಯಕ್ಕೆ ತಕ್ಕಂತೆ ಶರೀರದ ತೂಕವನ್ನು ಇಳಿಸಿಕೊಳ್ಳಬೇಕಾಗುತ್ತದೆ ಅಥವಾ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಸೂಕ್ತ ಬಿಎಂಐನ್ನು ಕಾಯ್ದುಕೊಳ್ಳುವ ಮೂಲಕ ಮಧುಮೇಹಕ್ಕೆ ತುತ್ತಾಗುವ ಅಪಾಯವನ್ನು ಶೇ.70ರಷ್ಟು ದೂರ ಮಾಡಬಹುದಾಗಿದೆ.

► ಸಲಾಡ್‌ಗಳ ಸೇವನೆ

ದಿನಕ್ಕೆ ಕನಿಷ್ಠ ಒಂದು ಬಾರಿ, ಮಧ್ಯಾಹ್ನದ ಅಥವಾ ರಾತ್ರಿಯ ಊಟದ ಮೊದಲು ಗಜ್ಜರಿ, ಮುಳ್ಳುಸೌತೆ, ಲೆಟ್ಯೂಸ್ ಅಥವಾ ಸಲಾಡ್ ಸೊಪ್ಪು, ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳಂತಹ ವಿವಿಧ ತರಕಾರಿಗಳು ಮತ್ತು ಹಸಿರು ಸೊಪ್ಪುಗಳನ್ನೊಳಗೊಂಡ ಸಲಾಡ್ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಈ ಸಲಾಡ್‌ಗೆ ಒಂದು ಚಮಚ ವಿನೆಗರ್ ಅನ್ನು ಕೂಡ ಸೇರಿಸಿಕೊಳ್ಳಬಹುದು. ಇದರಿಂದ ನೀವು ನಂತರ ಸೇವಿಸುವ ಆಹಾರದಲ್ಲಿಯ ಸಕ್ಕರೆಯು ರಕ್ತದಲ್ಲಿ ಸೇರಿಕೊಳ್ಳುವ ಪ್ರಮಾಣವು ಕಡಿಮೆಯಾಗುತ್ತದೆ ಮತ್ತು ರಕ್ತದಲ್ಲಿಯ ಸಕ್ಕರೆಯ ಮಟ್ಟವು ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಮಧುಮೇಹದ ಅಪಾಯವೂ ಕಡಿಮೆಯಾಗುತ್ತದೆ.

► ಹೆಚ್ಚು ನಡೆಯಿರಿ

ನಮ್ಮ ಶರೀರದ ಫಿಟ್‌ನೆಸ್ ಕಾಯ್ದುಕೊಳ್ಳಲು ನಿಯಮಿತ ವ್ಯಾಯಾಮ ಅತ್ಯಂತ ಮುಖ್ಯವಾಗಿದೆ. ಮಧುಮೇಹ ತಡೆಗೆ ಸಂಬಂಧಿಸಿದಂತೆ ನಡಿಗೆಯು ಅತ್ಯುತ್ತಮ ವ್ಯಾಯಾಮವಾಗಿದೆ. ಎಳೆಯ ವಯಸ್ಸಿನಿಂದಲೇ ಪ್ರತಿ ದಿನ ಕನಿಷ್ಠ 40 ನಿಮಿಷಗಳ ಬಿರುಸಿನ ನಡಿಗೆಯು ಚಯಾಪಚಯ ವ್ಯವಸ್ಥೆಯ ಸುಸ್ಥಿತಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಮತ್ತು ಮಧುಮೇಹದ ಅಪಾಯವನ್ನು ತಗ್ಗಿಸಲು ಶರೀರದಲ್ಲಿ ಇನ್ಸುಲಿನ್ ಮಟ್ಟವು ಸಮತೋಲನದಲ್ಲಿರುವಂತೆ ಮಾಡುತ್ತದೆ.

► ಇಡೀ ಧಾನ್ಯಗಳ ಸೇವನೆ

ನಿಮ್ಮ ಆಹಾರದಲ್ಲಿ, ವಿಶೇಷವಾಗಿ ನಿಮ್ಮ ಬೆಳಗಿನ ತಿಂಡಿಯಲ್ಲಿ ಓಟ್ಸ್, ಬಾರ್ಲಿ, ಕಂದು ಅಕ್ಕಿ, ರಾಗಿ ಇತ್ಯಾದಿಗಳಂತಹ ಇಡೀ ಧಾನ್ಯಗಳು ಇರುವಂತೆ ನೋಡಿಕೊಳ್ಳಿ. ಇಡೀ ಧಾನ್ಯಗಳು ನಾರು ಸೇರಿದಂತೆ ಹಲವಾರು ಪೋಷಕಾಂಶಗಳನ್ನು ಸಮೃದ್ಧವಾಗಿ ಒಳಗೊಂಡಿರುತ್ತವೆ. ಅವುಗಳಲ್ಲಿಯ ನಾರು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ಕಡಿಮೆ ಮಾಡುತ್ತದೆ ಮತ್ತು ಮಧುಮೇಹ ಬಾರದಂತೆ ತಡೆಯುತ್ತದೆ. ಮಲಬದ್ಧತೆ, ಅಧಿಕ ರಕ್ತದೊತ್ತಡ ಚಿಕಿತ್ಸೆಯಲ್ಲೂ ಇಡೀ ಧಾನ್ಯಗಳ ಸೇವನೆಯು ನೆರವಾಗುತ್ತದೆ.

► ಕಾಫಿಯನ್ನು ಸೇವಿಸಿ

ಕಾಫಿ ಸೇವನೆಯ ಒಳಿತು-ಕೆಡುಕುಗಳ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ವಾದವಿವಾದಗಳಿವೆಯಾದರೂ ಪ್ರತಿದಿನ ಎರಡು ಕಪ್ ಕಾಫಿ ಸೇವನೆಯಿಂದ ಟೈಪ್ 2 ಮಧುಮೇಹದ ಅಪಾಯವನ್ನು ಶೇ.29ರಷ್ಟು ತಗ್ಗಿಸಬಹುದು ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಆದರೆ ಹೀಗೆ ಸೇವಿಸುವ ಕಾಫಿ ಸಕ್ಕರೆರಹಿತವಾಗಿರಬೇಕು ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಕಾಫಿಯಲ್ಲಿನ ಉತ್ಕರ್ಷಣ ನಿರೋಧಕಗಳು ಮಧುಮೇಹ ವನ್ನು ದೂರವಿರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

► ಫಾಸ್ಟ್‌ಫುಡ್ ಸೇವನೆ ಬೇಡ

 ಇಂದು ಎಲ್ಲೆಂದರಲ್ಲಿ ಫಾಸ್ಟ್‌ಫುಡ್ ಅಂಗಡಿಗಳಿದ್ದು, ನಮ್ಮನ್ನು ಸುಲಭವಾಗಿ ಆಕರ್ಷಿಸುತ್ತವೆ. ಆದರೆ ಕರಿದ ಖಾದ್ಯ, ಪಿಝ್ಝ್ ಮತ್ತು ಬರ್ಗರ್‌ಗಳಂತಹ ಫಾಸ್ಟ್ ಫುಡ್ ಮತ್ತು ಸಂಸ್ಕರಿತ ಆಹಾರಗಳು ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಜೀರ್ಣ ಸಮಸ್ಯೆ, ಹೃದಯ ಸಮಸ್ಯೆಗಳು ಸೇರಿದಂತೆ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತವೆ. ದೀರ್ಘಾವಧಿಯಲ್ಲಿ ಈ ಆಹಾರಗಳು ಇನ್ಸುಲಿನ್ ಮಟ್ಟದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತವೆ. ಹೀಗಾಗಿ ಇಂತಹ ಆಹಾರಗಳಿಂದ ದೂರವಿರುವುದು ಹೆಚ್ಚಿನವರಲ್ಲಿ ಮಧುಮೇಹವನ್ನು ತಡೆಯಬಲ್ಲುದು.

► ದಾಲ್ಚಿನ್ನಿ ಸೇವನೆ

ನಿಮ್ಮ ಆಹಾರದಲ್ಲಿ ಹೆಚ್ಚಿನ ದಾಲ್ಚಿನ್ನಿಯ ಸೇರ್ಪಡೆಯಿಂದ ಮಧುಮೇಹ ಉಂಟಾಗುವ ಅಪಾಯವನ್ನು ಶೇ.48ರಷ್ಟು ತಗ್ಗಿಸಬಹುದಾಗಿದೆ. ದಾಲ್ಚಿನ್ನಿಯು ನಮ್ಮ ಶರೀರದಲ್ಲಿಯ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ತಗ್ಗಿಸುವ ನೈಸರ್ಗಿಕ ಸಾಮರ್ಥ್ಯ ಹೊಂದಿದೆ ಎನ್ನುವುದನ್ನು ಸಂಶೋಧನೆಗಳು ಸಾಬೀತು ಮಾಡಿವೆ. ಇವೆರಡು ನೈಸರ್ಗಿಕವಾಗಿ ಕಡಿಮೆಯಾದರೆ ರಕ್ತದಲ್ಲಿಯ ಸಕ್ಕರೆಯ ಮಟ್ಟವೂ ಸಮತೋಲನ ದಲ್ಲಿರುತ್ತದೆ ಮತ್ತು ಮಧುಮೇಹವನ್ನು ತಡೆಯಲು ಸಹಕಾರಿಯಾಗುತ್ತದೆ.

► ಒತ್ತಡ ನಿವಾರಣೆ

ಹಲವು ಬಾರಿ ತಲೆನೋವಿನಂತಹ ಮಾಮೂಲು ಸಮಸ್ಯೆಯಿಂದ ಹಿಡಿದು ಕ್ಯಾನ್ಸರ್‌ನಂತಹ ಮಾರಣಾಂತಕ ಕಾಯಿಲೆಗಳಿಗೆ ಮೂಲಕಾರಣಗಳಲ್ಲಿ ಮಾನಸಿಕ ಒತ್ತಡವೂ ಒಂದಾಗಿದೆ. ಹೀಗಾಗಿ ನೀವು ಆಗಾಗ್ಗೆ ಮಾನಸಿಕ ಒತ್ತಡಕ್ಕೊಳಗಾಗುತ್ತಿದ್ದರೆ ನೀವು ಮಧುಮೇಹಕ್ಕೆ ಗುರಿಯಾಗುವ ಅಪಾಯವೂ ಇರುತ್ತದೆ. ಆದ್ದರಿಂದ ನಿಮ್ಮ ಶರೀರದಲ್ಲಿ ಕಾರ್ಟಿಸಾಲ್ ಹಾರ್ಮೋನ್ ಮಟ್ಟವನ್ನು ತಗ್ಗಿಸಲು ಒತ್ತಡ ನಿವಾರಣೆ ಮಾರ್ಗಗಳು, ಯೋಗಾಭ್ಯಾಸ ಇತ್ಯಾದಿಗಳನ್ನು ಪ್ರಯತ್ನಿಸಿ.

► ಧೂಮ್ರಪಾನವನ್ನು ವರ್ಜಿಸಿ

ಮಾನಸಿಕ ಒತ್ತಡದಂತೆ ಧೂಮ್ರಪಾನವೂ ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಇನ್ನೊಂದು ಪ್ರಮುಖ ಕಾರಣವಾಗಿದೆ. ಶ್ವಾಸಕೋಶ ಕ್ಯಾನ್ಸರ್‌ನಂತಹ ಪ್ರಮುಖ ಕಾಯಿಲೆಗಳ ಜೊತೆಗೆ ಧೂಮ್ರಪಾನವು ಮಧುಮೇಹದೊಂದಿಗೂ ಗುರುತಿಸಿಕೊಂಡಿದೆ. ಹೀಗಾಗಿ ಧೂಮ್ರಪಾನದ ಚಟವನ್ನು ಬಿಡುವ ಮೂಲಕ ಮಧುಮೇಹದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X