ಸುರತ್ಕಲ್: 'ಟೋಲ್ ವಿರೋಧಿ ಹೋರಾಟ ಸಮಿತಿ' ಯಿಂದ ಪ್ರತಿಭಟನೆ

ಸುರತ್ಕಲ್, ಫೆ. 16: ಅಕ್ರಮ ಟೋಲ್ ಗೇಟ್ ಮುಂದುವರಿಸುವ ಹುನ್ನಾರದ ವಿರುದ್ಧ, ಟೋಲ್ ಪ್ಲಾಝಾದಲ್ಲಿ ರಿಫ್ರೆಶ್ ಮೆಂಟ್, ವಿಶ್ರಾಂತಿ ಕೊಠಡಿ ನಿರ್ಮಿಸುತ್ತಿರುವ ಹೆದ್ದಾರಿ ಪ್ರಾಧಿಕಾರದ ಕ್ರಮವನ್ನು ಖಂಡಿಸಿ ಸುರತ್ಕಲ್ ಟೋಲ್ ಗೇಟ್ ಮುಂಭಾಗ 'ಟೋಲ್ ವಿರೋಧಿ ಹೋರಾಟ ಸಮಿತಿ' ಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಟೋಲ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ, ಸ್ಥಳೀಯ ಪಾಲಿಕೆ ಸದಸ್ಯರಾದ ರೇವತಿ ಪುತ್ರನ್, ಡಿವೈಎಫ್ಐ ದ ಕ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್, ನೌಷದ್ ಬೆಂಗ್ರೆ, ಶ್ರೀನಿವಾಸ ಹೊಸಬೆಟ್ಟು, ರಶೀದ್ ಮುಕ್ಕ, ರಾಜೇಶ್ ಪಡ್ರೆ, ಅಬೂಬಕರ್ ಬಾವಾ ಮತ್ತಿತರರು ಉಪಸ್ಥಿತರಿದ್ದರು.
Next Story





