ಪತ್ರಕರ್ತರಲ್ಲಿ ಮಾನವೀಯ ಮೌಲ್ಯ ಅಗತ್ಯ: ಜಾನ್ ಡಿಸೋಜ

ಉಡುಪಿ, ಫೆ.16: ಪತ್ರಿಕೆಗಳು ಸಮಾಜಮುಖಿಯಾಗಬೇಕು. ಮಾನವೀ ಯತೆ, ಮಾನವೀಯ ವೌಲ್ಯಗಳನ್ನು ಉಳಿಸಿ ಬೆಳೆಸುವ ತೆರೆದ ಮನಸ್ಸು ಪತ್ರಕರ್ತರಿಗೆ ಇರಬೇಕು ಎಂದು ಹಿರಿಯ ಪತ್ರಕರ್ತ ಜಾನ್ ಡಿಸೋಜ ಹೇಳಿದ್ದಾರೆ.
ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸ ಲಾದ ಪತ್ರಿಕೆಗಳು ಮತ್ತು ಪ್ರಜಾಪ್ರಭುತ್ವ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಇಂದಿನ ಪತ್ರಿಕೆಗಳು ಸಾಮಾಜಿಕ ಜವಾಬ್ದಾರಿಯನ್ನು ಮರೆತು ಕಾರ್ಯನಿರ್ವ ಹಿಸುತ್ತಿವೆ. ಹಸಿವು ಬಡತನ, ನಿರುದ್ಯೋಗ, ಅಪೌಷ್ಠಿಕತೆ ಇತ್ಯಾದಿ ವಿಷಯ ಗಳನ್ನು ಬಿಟ್ಟು ಅತಿರಂಜನೆ ಮತ್ತು ರೋಚಕ ಸುದ್ದಿಗಳನ್ನು ಪ್ರಕಟಿಸುವುದೇ ಪತ್ರಿಕಾ ಧರ್ಮವೆಂದು ಮಾದ್ಯಮಗಳು ತಿಳಿದಂತಿದೆ. ಇದು ಪ್ರಜಾಪ್ರುತ್ವಕ್ಕೆ ಮಾರಕ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್, ವಹಿಸಿದ್ದರು. ಅಂತರಿಕ ಗುಣಮಟ್ಟ ಖಾತರಿ ಘಟಕದ ಸಂಚಾಲಕ ಡಾ. ಗುರುರಾಜ ಪ್ರಭು ಕೆ. ಕಲಾ ನಿಕಾಯದ ಡೀನ್ ಪ್ರೊ.ಸೋಜನ್ ಕೆ.ಜಿ. ಉಪಸ್ಥಿತರಿದ್ದರು.
ಮಾನವ ಹಕ್ಕುಗಳ ಸಂಘದ ಸಂಚಾಲಕ ಎನ್.ನಿತ್ಯಾನಂದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅಶೋಕ ಭಂಡಾರಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಸುಚಿತ್ರ ಕಾರ್ಯ ಕ್ರಮ ನಿರೂಪಿಸಿದರು.





