ಮಂಗಳೂರು, ಫೆ.16: ಪಣಂಬೂರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಾ. 20ರಿಂದ ಎಪ್ರಿಲ್ 1ರವರೆಗೆ ನಡೆಯಲಿರುವ ಮಂಗಳೂರು ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಪಂದ್ಯಾಟದ ಆಟಗಾರರ ಹರಾಜು ಪ್ರಕ್ರಿಯೆ ಫೆ. 17ರಂದು ನಡೆುಲಿದೆ.
ಸುದ್ದಿಗೋಷ್ಠಿಯಲ್ಲಿಂದು ಎಂಪಿಎಲ್‌ನ ಮುಖ್ಯಸ್ಥರಾದ ಮುಹಮ್ಮದ್ ಸಿರಾಜುದ್ದೀನ್ ಮಾಹಿತಿ ನೀಡಿ, ಮಂಗಳೂರು ಅಕೇಶನಲ್ಸ್ ಕ್ರೀಡಾ ಸಂಸ್ಥೆ ಮತ್ತು ಸಿ. ಬರ್ಡ್ ಕ್ರಿಕೆಟ್ ಅಕಾಡೆಮಿ ಸಂಸ್ಥೆಗಳು ಆಯೋಜಿಸುತ್ತಿರುವ ಎಂಪಿಎಲ್‌ನ ಹರಾಜು ಪ್ರಕ್ರಿಯೆ ಮಧ್ಯಾಹ್ನ 2.30ಕ್ಕೆ ಫೋರಂ ಫಿಝಾ ಮಾಲಿನ ಎರಡನೆ ಮಹಡಿಯಲ್ಲಿ ನಡೆಯಲಿದೆ ಎಂದರು.
ಫೇಸ್‌ಬುಕ್ www.facebook/channelonekarnataka/facebook.com/mplofficial ಪುಟದ ಮೂಲಕ ನೇರ ಪ್ರಸಾರವಾಗಲಿದೆ. ಪ್ರತಿಯೊಂದು ತಂಡ ಆಟಗಾರರನ್ನು ಖರೀದಿಸಲು 25,000 ರೂ. ನಿಗದಿಪಡಿಸಲಾಗಿದೆ. ವಿವಿಧ ವಿಭಾಗಗಳ ಆಟಗಾರರನ್ನು ಖರೀದಿಸುವಲ್ಲಿ ಹಣವನ್ನು ವಿಂಗಡಿಸಲಾಗಿದೆ. ಪ್ರತಿ ತಂಡ 17 ಮಂದಿ ಆಟಗಾರರನ್ನು ತಂಡದಲ್ಲಿ ಹೊಂದುವ ಅಕವಾಶ ಕಲ್ಪಿಸಲಾಗಿದೆ. ಎಂಪಿಎಲ್‌ನಲ್ಲಿ ಭಾಗವಹಿಸುವ 12 ತಂಗಡಗಳಿಗೆ ಓರ್ವ ದಿಕ್ಸೂಚಿ ಆಟಗಾರರನ್ನು ನೇಮಕ ಮಾಡುವ ಅವಕಾಶ ನೀಡಲಾಗಿದೆ. ಅದರಂತೆ ಕೋಸ್ಟಲ್ ಡೈಜೆಸ್ಟ್ ತಂಡ ಆದಿತ್ಯ ಸೋಮಣ್ಣ, ಯುನೈಟೆಡ್ ಉಳ್ಳಾಲ ನಿಶ್ಚಿತ್ ರಾವ್, ಬೆದ್ರ ಬುಲ್ಸ್ ಮೂಡಬಿದ್ರೆ ಭರತ್ ಧೂರಿ, ಮಂಗಳೂರು ಯುನೈಟೆಡ್ ಅಕ್ಷಯ್ ಬಳ್ಳಾಲ್, ಟಿ. ಫೋರಂ ಸೂಪರ್ ಕಿಂಗ್ಸ್ ನೆಹಾಲ್ ಉಳ್ಳಾಲ್, ವೈಸ್ ವಾರಿಯರ್ಸ್ ರಾಹುಲ್ ಕೋಟ್ಯಾನ್, ಅಲಿ ವಾರಿಯರ್ಸ್ ರಿತೇಶ್ ಭಟ್ಕಳ, ಎ.ಕೆ. ಸ್ಪೋರ್ಟ್ಸ್ ಕೆ.ಸಿ. ಕಾರ್ಯಪ್ಪ, ಕಾರ್ಕಳ ಗ್ಲೇಡಿಯೇಟರ್ಸ್ ನಿತಿನ್ ಮುಲ್ಕಿ, ಮ್ಯಾಸ್ಟ್ರೋ ಟೈಟಾನ್ ನೆಹಾಲ್ ಡಿಸೋಜಾ, ಟೀ ಎಲಿಗೆಂಟ್ ಮನೋಜ್ ಎಂ., ಕ್ಲಾಸಿಕ್ ಬಂಟ್ವಾಳ ತಂಡ ಆರಿಫ್ ಮುಕ್ಕ ಅವರನ್ನು ಆಯ್ಕೆ ಮಾಡಿದೆ ಎಂದು ಅವರು ವಿವರ ನೀಡಿದರು. ಗೋಷ್ಠಿಯಲ್ಲಿ ಇಮ್ತಿಯಾಝ್, ಬಾಲಕೃಷ್ಣ, ಶಶಿಧರ್, ಸಫ್ದರ್ ಅಲಿ ಉಪಸ್ಥಿತರಿದ್ದರು.