ನೂಜಿಬಾಳ್ತಿಲ ಸೈಂಟ್ ಮೇರಿಸ್ ದೇವಾಲಯದ ಕಲ್ಲಿನ ದೀಪ ಒಡೆದ ಕಿಡಿಗೇಡಿಗಳು

ಕಡಬ, ಫೆ.16. ಇಲ್ಲಿನ ನೂಜಿಬಾಳ್ತಿಲ ಸೈಂಟ್ ಮೇರಿಸ್ ಪ್ರೊ ಕ್ಯಾಥೆಡ್ರಲ್ ದೇವಾಲಯದ ಶಿಲುಬೆ ಗೋಪುರದ ಮುಂಭಾಗದಲ್ಲಿ ಇರುವ ಕಲ್ಲಿನ ದೀಪವನ್ನು ಕಿಡಿಗೇಡಿಗಳು ಒಡೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಧರ್ಮಸ್ಥಳ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿರುವ ನೂಜಿಬಾಳ್ತಿಲ ಸೈಂಟ್ ಮೇರಿಸ್ ಪ್ರೊ ಕ್ಯಾಥೆಡ್ರಲ್ ದೇವಾಲಯದ ಮುಂಭಾಗದಲ್ಲಿನ ಕಲ್ಲಿನ ದೀಪವನ್ನು ಕಿಡಿಗೇಡಿಗಳು ಕಿತ್ತೆಸೆದಿದ್ದು, ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಕಡಬ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಡಬ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
Next Story





