‘ಸುಲ್ತಾನ್ ವಾಚಸ್’ ಮಳಿಗೆಯಲ್ಲಿ ರ‍್ಯಾಡೊ ವಾಚುಗಳ ಸಂಗ್ರಹ ವಿಭಾಗ ಆರಂಭ

ಮಂಗಳೂರು, ಫೆ. 16: ನಗರದ ಸಿಟಿ ಸೆಂಟರ್‌ನಲ್ಲಿರುವ ಸುಲ್ತಾನ್ ಸಮೂಹ ಸಂಸ್ಥೆಗಳ ಅಧೀನದ ‘ಸುಲ್ತಾನ್ ವಾಚಸ್’ ಮಳಿಗೆಯಲ್ಲಿ ರ‍್ಯಾಡೊ ವಾಚುಗಳ ವಿವಿಧ ವಿನ್ಯಾಸಗಳ ಸಂಗ್ರಹ ವಿಭಾಗ ಶುಕ್ರವಾರ ಉದ್ಘಾಟನೆಗೊಂಡಿತು.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಡಾ.ಯು.ಟಿ. ಇಫ್ತಿಕಾರ್ ಹಾಗೂ ಎ.ಜೆ.ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್‌ನ ಪಿಆರ್‌ಒ ಅಭಿಲಾಶ್ ಪಿ.ವಿ. ಅವರು ನೂತನ ರ‍್ಯಾಡೊ ಹೈಪರ್‌ಕ್ರೋಮ್‌ನ ಸಂಗ್ರಹದ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸಿ.ಟಿ. ಸೆಂಟರ್ ಮಾಲ್‌ನ ಮ್ಯಾನೇಜರ್ ನಿಶ್ಮಿತಾ, ರ‍್ಯಾಡೊ ಗ್ರೂಪ್‌ನ ದಕ್ಷಿಣ ಭಾರತ ವಿಭಾಗದ ಮ್ಯಾನೇಜರ್ ಸಮೀರ್ ಕಟ್ಟಾಯಂ, ಸುಲ್ತಾನ್ ಗ್ರೂಪ್‌ನ ಜನರಲ್ ಮ್ಯಾನೇಜರ್ ಎ.ಕೆ.ಉಣ್ಣಿತನ್, ಸುಲ್ತಾನ್ ವಾಚಸ್‌ನ ಸೇಲ್ಸ್ ಮ್ಯಾನೇಜರ್ ಲತೀಶ್ ಸಾಲ್ಯಾನ್, ಸುಲ್ತಾನ್ ಗ್ರೂಪ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಆಸಿಫ್ ಇಕ್ಬಾಲ್ ಉಪಸ್ಥಿತರಿದ್ದರು.
ಡಾ.ಯು.ಟಿ.ಇಫ್ತಿಕಾರ್, ಅಭಿಲಾಶ್ ಪಿ.ವಿ. ಮತ್ತು ಸಮೀರ್ ಕಟ್ಟಾಯಂ ಸಂಸ್ಥೆಗೆ ಶುಭ ಹಾರೈಸಿದರು. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸಗಳನ್ನು ಒಳಗೊಂಡ ಖ್ಯಾತ ರ‍್ಯಾಡೊ ಬ್ರಾಂಡ್‌ನ ವಿಶಿಷ್ಟ ಮತ್ತು ಆಕರ್ಷಕ ಸಂಗ್ರಹವನ್ನು ಈ ಮಳಿಗೆ ಹೊಂದಿದೆ.





