ಶ್ರೀರಾಘವೇಂದ್ರ ಸಪ್ತಾಹ ರಜತೋತ್ಸವ ಉದ್ಘಾಟನೆ

ಉಡುಪಿ, ಫೆ.16: ಪರ್ಯಾಯ ಶ್ರೀ ಪಲಿಮಾರು ಮಠ ಹಾಗೂ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣಾ ಸಮಿತಿ ಮಂತ್ರಾಲಯ ಇವರ ಜಂಟಿ ಆಶ್ರಯ ದಲ್ಲಿ ಫೆ.22ರವರೆಗೆ ನಡೆಯಲಿರುವ ಶ್ರೀರಾಘವೇಂದ್ರ ಸಪ್ತಾಹ ರಜತೋತ್ಸವ ಕಾರ್ಯಕ್ರಮಕ್ಕೆ ಮಂತ್ರಾಲಯ ಮಠಾಧೀಶ ಶ್ರೀಸುಬುಧೇಂದ್ರ ತೀರ್ಥರು ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಚಾಲನೆ ನೀಡಿದರು.
ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥರು ಹಾಗೂ ಪ್ರಯಾಗ ಮಠದ ಶ್ರೀವಿದ್ಯಾತ್ಮ ತೀರ್ಥರು ಉಪಸ್ಥಿತರಿದ್ದರು.
ಮಂತ್ರಾಲಯದ ಪಂಡಿತ ಕೇಸರಿ ವಿದ್ವಾನ್ ರಾಜಾಗಿರಿಯಾಚಾರ್ಯ, ಪರ್ಯಾಯ ಮಠದ ದಿವಾನರಾದ ವಿದ್ವಾನ್ ಶಿಬರೂರು ವೇದವ್ಯಾಸ ತಂತ್ರಿ, ಚಿಂತರೇವಲದ ಆದ್ಯ ಕೇಶವಾಚಾರ್ಯ ವಿಶೇಷ ಅತಿಥಿಗಳಾಗಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಮಂತ್ರಾಲಯ ಶ್ರೀರಾಘವೇಂದ್ರ ಸಪ್ತಾಹ ಕಾರ್ಯಚರಣ ಸಮಿತಿಯ ಪರಿಮಳಾಚಾರ್ಯ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
Next Story





