ಶುಹೈಬ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣು
ಶುಹೈಬ್
ಕಣ್ಣೂರ್,ಫೆ.18: ಯುವಕಾಂಗ್ರೆಸ್ ನಾಯಕ ಶುಹೈಬ್ರನ್ನು ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಆಕಾಶ್ ತಿಲ್ಲಂಗೇರಿ, ರಿಜಿನ್ ರಾಜ್ ಶರಣಾದ ಆರೋಪಿಗಳಾಗಿದ್ದು, ಇಂದು ಬೆಳಗ್ಗೆ ಇವರು ಮಾಲೂರು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಆಕಾಶ್ಗಾಗಿ ಕಳೆದ ಮೂರು ದಿವಸಗಳಿಂದ ಪೊಲೀಸರು ಭಾರೀ ಹುಡುಕಾಟವನ್ನು ನಡೆಸಿದ್ದರು.
ತಿಲ್ಲಂಗೇರಿಯ ಆರೆಸ್ಸೆಸ್ ಕಾರ್ಯಕರ್ತ ವಿಷ್ಣು ಕೊಲೆ ಕೃತ್ಯಕ್ಕೆ ಸಂಬಂಧಿಸಿ ಆಕಾಶ್ ಕೆಲವು ವರ್ಷಗಳಿಂದ ಭೂಗತನಾಗಿದ್ದ ವ್ಯಕ್ತಿಯಾಗಿದ್ದು, ಈತ ತಿರುವನಂತಪುರಂನ ಪಾರ್ಟಿ ನಾಯಕರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.ಜಿತಿನ್ ರಾಜ್ ವಿನೀಷ್ ಕೊಲೆಯಲ್ಲಿ ಶಾಮೀಲಾಗಿದ್ದವನು ಎನ್ನಲಾಗಿದೆ. ಆಕಾಶ್ ಸಿಪಿಎಂನ ಅಧಿಕೃತ ಸದಸ್ಯನಲ್ಲ. ಆದರೆ ಈತನ ತಂದೆ ತಾಯಿ ಸಿಪಿಎಂನ ಸ್ಥಳೀಯ ನಾಯಕರು.
Next Story