ದಾವಣಗೆರೆ: ಈಜಲು ತೆರಳಿದ್ದ ಇಬ್ಬರು ಯುವಕರು ಮೃತ್ಯು

ದಾವಣಗೆರೆ,ಫೆ.18: ಈಜಲು ಹೋಗಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಗರದ ಹೊರವಲಯದ ಹೊಸಕುಂದುವಾಡ ಬಳಿಯ ಕಾಲುವೆಯಲ್ಲಿ ಭಾನುವಾರ ನಡೆದಿದೆ.
ನಗರದ ವಿನೋಭನಗರದ ಪ್ರದೀಪ್ (22), ರಮೇಶ್ (23) ಮೃತಪಟ್ಟ ಯುವಕರು ಎಂದು ತಿಳಿದು ಬಂದಿದೆ. ರಮೇಶ್ ಪೇಂಟರ್ ಆಗಿ ಹಾಗೂ ಪ್ರದೀಪ್ ಅಕ್ವೋಗಾರ್ಡ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಭಾನುವಾರ ಮಧ್ಯಾಹ್ನ ಕಾಲುವೆಗೆ ಈಜಲು ಈ ಇಬ್ಬರು ಇನ್ನೋರ್ವ ಸ್ನೇಹಿತನೊಂದಿಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ. ಇನ್ನೋರ್ವ ಸ್ನೇಹಿತ ನಾಪತ್ತೆಯಾಗಿದ್ದು, ಸ್ಥಳದಲ್ಲಿ ಪಲ್ಸರ್ ಬೈಕ್, 5 ಸಾವಿರ ನಗದು ಹಾಗೂ 3 ಮೊಬೈಲ್ ಪತ್ತೆಯಾಗಿದೆ.
ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story