ದಾವಣಗೆರೆ: ಉಚಿತ ಆರೋಗ್ಯ ತಪಾಸಣಾ ಶಿಬಿರ
ದಾವಣಗೆರೆ,ಫೆ.18: ಸ್ಮಾರ್ಟ್ ಸಿಟಿ ನಿಯಮಿತ, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಡಕ್ಕಿ ಭಟ್ಟಿ ಮತ್ತು ಸುತ್ತಮುತ್ತಲಿನ ಪ್ರಮುಖ ಪ್ರದೇಶಗಳ ಸಾರ್ವಜನಿಕರಿಗೆ, ಮಂಡಕ್ಕಿ ಉತ್ಪಾದಕರಿಗೆ ಮತ್ತು ಮಂಡಕ್ಕಿ ಭಟ್ಟಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಹೆಚ್.ಕೆ.ಜಿ.ಎಸ್ ಶಾದಿಮಹಲ್‍ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರ ಉದ್ಘಾಟಿಸಿದ ಮೇಯರ್ ಅನಿತಾ ಬಾಯಿ ಮಾಲತೇಶ್, ಶಿಬಿರಾಧಿಕಾರಿಗಳಿಗೆ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು. ಉಪಮೇಯರ್ ನಾರಗತ್ನಮ್ಮ, ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ಮಾತನಾಡಿ, ಮಂಡಕ್ಕಿ ಭಟ್ಟಿ ಲೇಔಟ್‍ನ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಸಂಪೂರ್ಣ ಆರೋಗ್ಯದ ಸಹಾಯ ಇಟ್ಟುಕೊಂಡು ಇಂತಹ ಆರೋಗ್ಯ ಶಿಬಿರಗಳಿಗೆ ಒತ್ತು ನೀಡಲಾಗಿದೆ ಮತ್ತು ಪ್ರತಿ ತಿಂಗಳು 3ನೇ ಶನಿವಾರದಂದು ನಡೆಸಲಾಗುವುದು ಅದರ ಉಪಯೋಗ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ಮುಸ್ಲಿಂ ಸಮಾಜದ ಮುಖಂಡ ಸಾರಿಕ್ ಪೈಲ್ವಾನ್, ಮಂಡಕ್ಕಿ ಭಟ್ಟಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ರಿಯಾಜ್ ಅಹಮ್ಮದ್, ಚಿಗಟೇರಿ ಜಿಲ್ಲಾ ಆಸ್ಪತ್ರೆ ತಜ್ಞ ವೈದ್ಯರು ಎಎಒಒಅ ಕಾಲೇಜಿನ ವೈದ್ಯರು, ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಕಾರ್ಯಪಾಲಕ ಅಭಿಯಂತರ ಗುರುಪಾದಯ್ಯ ಕೆ.ಎಂ, ಐಡೆಕ್ ಪಿ.ಎಂ.ಸಿಯ ಟೀಮ್ ಲೀಡರ್ ಮಧುಸೂದನ್‍ರಾವ್ ಇದ್ದರು.
ಕಾರ್ಯಕ್ರಮದಲ್ಲಿ ಅಂದಾಜು 600 ಸಾರ್ವಜನಿಕರಿಗೆ 100 ಮಂಡಕ್ಕಿ ಭಟ್ಟಿ ಕಾರ್ಮಿಕರಿಗೆ ಉಚಿತ ಔಷಧಿ ಮತ್ತು ಆರೋಗ್ಯ ಪರೀಕ್ಷೆ ಮಾಡಲಾಯಿತು.







