ಪುದು ಗ್ರಾಪಂ ಚುನಾವಣೆ : ಮತ ಚಲಾಯಿಸಲು ಬಂದ ವ್ಯಕ್ತಿಗೆ ಗುಂಪಿನಿಂದ ಹಲ್ಲೆ; ಆರೋಪ

ಬಂಟ್ವಾಳ, ಫೆ. 18: ಮತ ಹಾಕಲು ಬಂದಿರುವ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ಮಾಡಿದ ಘಟನೆ ಪುದು ಗ್ರಾಮ ಪಂಚಾಯತ್‌ನ 5A ಮತಗಟ್ಟೆಯ ಹೊರಭಾಗದಲ್ಲಿ ನಡೆದಿದ್ದು, ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರಂಗಿಪೇಟೆಯ ಸಮೀಪದ ನಿವಾಸಿ ಸಿದ್ದಿಕ್ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ. ಪುದು ಗ್ರಾಮ ಪಂಚಾಯತ್‌ನ ಸುಜೀರು ಮತಗಟ್ಟೆ 5A ಯಲ್ಲಿ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ಘಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಜಾಫರ್, ಶರೀಫ್ ಮತ್ತು ಆಸೀಫ್ ಎಂಬವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಿದ್ದೀಕ್ ಎಂಬವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪುದು ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯು ಶಾಂತಿಯುತವಾಗಿ ಮುಗಿದಿರುತ್ತದೆ ಎಂದು ಜಿಲ್ಲಾ ಎಸ್ಪಿ ಅವರು ತಿಳಿಸಿದ್ದಾರೆ.
Next Story





