ಪುದು ಗ್ರಾಪಂ ಚುನಾವಣೆ : ಶೇ. 72.50 ಮತದಾನ

ಪರಂಗಿಪೇಟೆ, ಫೆ.18: ಪುದು ಗ್ರಾಮ ಪಂಚಾಯತ್‍ನ 10 ವಾರ್ಡ್‍ಗಳ 34 ಸದಸ್ಯ ಸ್ಥಾನಗಳಿಗೆ ರವಿವಾರ ಚುನಾವಣೆ ನಡೆದಿದ್ದು, ಶೇ. 72.50 ಶೇ ರಷ್ಟು ಮತ ಚಲಾವಣೆಯಾಗಿದೆ.ಒಟ್ಟು 81 ಅಭ್ಯರ್ಥಿಗಳು ಕಣದಲ್ಲಿದ್ದು, ಫೆ. 20ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಒಟ್ಟು 10 ವಾರ್ಡುಗಳ 11 ಬೂತ್‍ಗಳಲ್ಲಿ ಮತದಾನ ನಡೆಯಿತು. 38 ಮಹಿಳೆಯರು 43 ಪುರುಷರು ಓಟ್ಟು 81 ಆಭ್ಯರ್ಥಿಗಳು ಕಣದಲ್ಲಿದ್ದರು. ವಾರ್ಡ್ ನಂ 1 ಕುಂಪನಮಜಲ್‍ನಲ್ಲಿ 1,028 (ಶೇ. 78.13) , ವಾರ್ಡ್ ನಂ2 ಅಮೆಮಾರ್(ಕೆಳಗೆ) 859 ಮತಗಳು (ಶೇ. 75.95), ವಾರ್ಡ್ ನಂ 3 ಅಮೆಮಾರ್ (ಮೇಲೆ) 700 ಮತಗಳು (ಶೇ. 65.54), ವಾರ್ಡ್ ನಂ 4 ಪರಂಗಿಪೇಟೆಯಲ್ಲಿ 479 ಮತಗಳು (ಶೇ. 67.18), ವಾರ್ಡ್ ನಂ 5 ಸುಜೀರ್ ನಲ್ಲಿ 536 ಮತಗಳು (ಶೇ. 73.42) ಹಾಗೂ 5ಎ ಬೂತ್‍ನಲ್ಲಿ 519 ಮತಗಳು (ಶೇ. 78.16), ವಾರ್ಡ್ ನಂ 6 ಪೇರಿಮಾರ್ ನಲ್ಲಿ 877 ಮತಗಳು (ಶೇ.74.07), ವಾರ್ಡ್ ನಂ 7 ಕುಂಜತ್ಕಳದಲ್ಲಿ 796 ಮತಗಳು (ಶೇ.69.10), ವಾರ್ಡ್ ನಂ 8 ನೆತ್ತರಕೆರೆಯಲ್ಲಿ 471 ಮತಗಳು (ಶೇ.69.47), ವಾರ್ಡ್ 9 ಕಡೆಗೋಳಿಯಲ್ಲಿ 570 ಮತಗಳು (ಶೇ. 77.66), ವಾರ್ಡ್ ನಂ 10 ಮಾರಿಪ್ಪಳ್ಳದಲ್ಲಿ 495 ಮತಗಳು (ಶೇ. 66.80) ಮತದಾನ ವಾಗಿದ್ದು ಒಟ್ಟು ಶೇ. 72.50 ಮತದಾನವಾಗಿರುತ್ತದೆ ಎಂದು ಇಒ ಎನ್.ಶಿವಪ್ರಕಾಶ್ ಅವರು ಮಾಹಿತಿ ನೀಡಿದ್ದಾರೆ.
ಪುದು ಗ್ರಾಮ ಪಂಚಾಯತ್ ಚುನಾವಣೆ ರವಿವಾರ ಕೆಳವು ಅಹಿತಕರ ಘಟನೆ ಹೊರತು ಪಡಿಸಿ ಶಾಂತ ರೀತಿಯಲ್ಲಿ ನಡೆಯಿತು.
ಅಲ್ಲದೇ ಮತಗಟ್ಟೆಯ ಕ್ಷೇತ್ರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪುದು ಗ್ರಾಪಂನಲ್ಲಿ 4,989 ಮಹಿಳೆಯರು ಹಾಗೂ 5,122 ಪುರುಷರು ಸೇರಿ ಒಟ್ಟು 10,111 ಮತದಾರರಿದ್ದಾರೆ.
ಕಳೆದ ಬಾರಿ 22 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಜಯಗಳಿಸಿದ್ದರೆ, 9 ಸ್ಥಾನಗಳಿಗಷ್ಟೆ ಬಿಜೆಪಿ ತೃಪ್ತಿಪಟ್ಟುಕೊಂಡಿತ್ತು.
ಫೆ.20ಕ್ಕೆ ಮತ ಎಣಿಕೆ:
ಫೆ.20ಕ್ಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದನ್ವಯ ಫೆ.20ರ ವರೆಗೆ ಚುನಾವಣಾ ನಡೆಯಲಿರುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.







