ಪತ್ರಕರ್ತನ ತಾಯಿ, ಮಗುವಿನ ಮೃತದೇಹಗಳು ನಾಲೆಯಲ್ಲಿ ಪತ್ತೆ

ನಾಗ್ಪುರ,ಫೆ.18: ಸ್ಥಳೀಯ ಪತ್ರಕರ್ತರೋರ್ವರ ತಾಯಿ ಮತ್ತು ಒಂದು ವರ್ಷದ ಪುತ್ರಿಯ ಶವ ರವಿವಾರ ನಗರದ ನಾಲೆಯೊಂದರಲ್ಲಿ ಪತ್ತೆಯಾಗಿವೆ. ಪತ್ರಕರ್ತ ರವಿಕಾಂತ ಕಾಂಬ್ಳೆ ಅವರ ತಾಯಿ ಉಷಾ ಕಾಂಬ್ಳೆ(52) ಮತ್ತು ಮಗಳು ರಿಷಿ ಶನಿವಾರ ಸಂಜೆ ಮನೆ ಸಮೀಪದ ಚಿನ್ನಾಭರಣಗಳ ಅಂಗಡಿಗೆಂದು ತೆರಳಿದವರು ಬಳಿಕ ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದರು.
ಬಹಾದುರ ನಗರದ ನಾಲೆಯೊಂದರಲ್ಲಿ ಪತ್ತೆಯಾಗಿರುವ ಅಜ್ಜಿ ಮತ್ತು ಮೊಮ್ಮಗಳ ಶವಗಳ ಮೇಲೆ ಗಾಯದ ಗುರುತುಗಳಿವೆ. ಅಪರಿಚಿತ ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಅವರನ್ನು ಕೊಲೆ ಮಾಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.
ಉಷಾ ಕಾಂಬ್ಳೆ ಲೇವಾದೇವಿ ವ್ಯವಹಾರವನ್ನು ನಡೆಸುತ್ತಿದ್ದರು ಎಂದು ಡಿಸಿಪಿ ನಿಲೇಶ ಭರ್ಣೆ ತಿಳಿಸಿದರು.
Next Story





