ಎಸ್ಕೆಎಸ್ಸೆಸ್ಸೆಫ್ ಗುರುಪುರ ಕೈಕಂಬ ವಲಯ:ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ, ಫೆ. 18: ಎಸ್ಕೆಎಸ್ಸೆಸ್ಸೆಫ್ ಗುರುಪುರ ಕೈಕಂಬ ವಲಯ ಸಮಿತಿಯ ಮಹಾಸಭೆ ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆಯಿತು. ಇದೇ ವೇಳೆ ಪ್ರಸ್ತುತ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಟಿ.ಪಿ. ಜಮಾಲುದ್ದೀನ್ ದಾರಿಮಿ, ಉಪಾಧ್ಯಕ್ಷರಾಗಿ ಶರೀಫ್ ಮಳಲಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಆರೀಫ್ ಕಮ್ಮಾಜೆ, ಕೋಶಾಧಿಕಾರಿಯಾಗಿ ಮುಸ್ತಫಾ ಸೈಟ್, ಸಂಘಟನಾ ಕಾರ್ಯದರ್ಶಿಯಾಗಿ ಸಿರಾಜ್, ಇರ್ಫಾನ್ ಮೌಲವಿ, ಶಾಕೀರ್ ಮಳಲಿ, ದಾವೂದ್, ತೌಸೀಫ್, ಬಶೀರ್, ಇಬ್ರಾಹಿಂ, ಫಯಾಝ್ ಅಡ್ಡೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಮಾಸ್ಟರ್, ಅಬ್ಬಾಸ್ ನಾಡಾಜೆ, ರಿಯಾಝ್ ಮಿಲನ್, ಹಾರೀಸ್ ಅಡ್ಡೂರು, ಇಕ್ಬಾಲ್ ಕುಕ್ಕಟ್ಟೆ, ಶಬೀರ್ ಮಲ್ಲೂರು, ಶೇಖಬ್ಬ, ಹಾಫೀರ್ ಕುಲಾಯಿ, ನಿಸಾರ್ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಪ್ರತಿನಿಧಿಗಳಾಗಿ ಅಕ್ಬರ್ ಅಲಿ, ಮುಹಮ್ಮದ್ ಮಾಸ್ಟರ್, ಹಾಫಿಳ್, ಶರೀಫ್, ಶಬೀರ್, ಅಹ್ಮದ್ ಬಾವ ಅವರನ್ನು ಆಯ್ಕೆ ಮಾಡಲಾಯಿತು.
ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಚುನಾವಣಾ ಅಧಿಕಾರಿ ಅಬ್ದುಲ್ ಖಾದರ್ ಬಂಟ್ವಾಳ ಸಹಕರಿಸಿದರು.ಎಸ್ಕೆಎಸ್ಸೆಸ್ಸೆಫ್‍ನ ಯಾಸಿರ್ ಅರಾಫತ್ ಕೌಸರಿ ದುವಾಃ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಇಬ್ರಾಹಿಂ ಕೊಣಾಜೆ, ಮಾನವ ಸರಪಳಿ ಚೇಯರ್‍ಮೆನ್ ರಿಯಾಝ್ ಮಿಲನ್, ಹಂಝ, ಕೆ.ಎಚ್. ಉಸ್ಮಾನ್, ಎಸ್ಕೆಎಸ್ಸೆಸ್ಸೆಫ್ ಕೈಕಂಬ ವಲಯ ಸಮಿತಿ ಗೌರವಾಧ್ಯಕ್ಷ ಆದಂ ಕುಕ್ಕಟ್ಟೆ, ಅಧ್ಯಕ್ಷ ಮುಹಮ್ಮದ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು. ಆರೀಫ್ ಕಮ್ಮಾಜೆ ನಿರೂಪಿಸಿದರು.







