ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಗಂಗೊಳ್ಳಿ, ಫೆ.18: ಹಕ್ಲಾಡಿ ಗ್ರಾಮದ ಸಾಲಾಡಿಗುಡ್ಡೆ ನಿವಾಸಿ ಮೂಕಾಂಬು (35) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಫೆ.14ರ ಸಂಜೆ ಯಿಂದ ಫೆ.17ರ ಬೆಳಗಿನ ಮಧ್ಯಾವಧಿಯಲ್ಲಿ ಮನೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ:ಶಿರ್ವ ಗ್ರಾಮದ ಕಲ್ಲಪ್ಪುಗುತ್ತು ನ್ಯಾರ್ಮ ನಿವಾಸಿ ನಾರಾಯಣ ಶೆಟ್ಟಿ(65) ಎಂಬವರು ಫೆ.17ರಂದು ಬೆಳಗ್ಗೆ ಸೂಡಾ ಗ್ರಾಮದ ಮುಗೇರ್ಕಳ ಎಂಬಲ್ಲಿ ಮದ್ಯದೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





