ಮಂಗಳೂರು : ಯುವ ಇಂಟಕ್ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು, ಫೆ. 19: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಮಿತಿಯ ಯುವ ಇಂಟಕ್ ಪದಾಧಿಕಾರಿಗಳ ಪದಗ್ರಹಣವು ಮಲ್ಲಿಕಟ್ಟೆಯ ಕಾಂಗ್ರೆಸ್ ಶನಿವಾರ ಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಕಾರ್ಮಿಕರ ಸಮಸ್ಯೆಗೆ ಬಹಳ ದೊಡ್ಡ ಧ್ವನಿಯಾಗಿ ಯುವ ಇಂಟಕ್ ಯುವಕರು ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಬಾಸಿತ್ ಬೋಳಾರ ಅವರನ್ನು ಆಯ್ಕೆ ಮಾಡಲಾಯಿತು.
ಅಲ್ಲದೆ, ಶೇಖ್ ಮುಹಮ್ಮದ್, ಶಕೀಬ್ ಯಾಸೀನ್, ಅಹ್ಮದ್ ಅಬ್ದುಲ್ ಹಫೀಝ್, ಮುಹಮ್ಮದ್ ಶಹನವಾಝ್, ಇಸ್ಮಾಯೀಲ್ ಬುಖಾರಿ, ಅಶೀಶ್ ಬಾವ ಇವರನ್ನು ವಿವಿಧ ವಾರ್ಡ್‌ಗಳ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಇವರಿಗೆ ಈ ಸಂದರ್ಭದಲ್ಲಿ ಆದೇಶ ಪತ್ರವನ್ನು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಯುವ ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿ ನೀಡಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಆರಿಫ್ ಬಾವ, ನಝೀರ್ ಬಜಾಲ್, ಪಿಯುಶ್ ಮೊಂತೆರೋ, ಸಿರಿಲ್ ಡಿಸೋಜಾ, ಯುವ ಕಾಂಗ್ರೆಸ್ ಮುಖಂಡ ಜ್ಞಾನೇಶ್, ಜಿಲ್ಲಾ ಯುವ ಇಂಟಕ್ ಪ್ರಧಾನ ಕಾರ್ಯದರ್ಶಿ ಮುದಸ್ಸಿರ್ ಕುದ್ರೋಳಿ, ಇರ್ಫಾನ್ ಅಳಕೆ, ಅಮೀಲ ಕುದ್ರೋಳಿ, ಇಜಾಝ್ ಕುದ್ರೋಳಿ, ಫಯಾಝ್ ಕುದ್ರೋಳಿ, ನಿಶಾದ ಎಮ್ಮೆಕೆರೆ ಉಪಸ್ಥಿತರಿದ್ದರು.





