ಕಾರ್ಕಳ : ಗ್ರಾಪಂ ಸೋಲಾರ್ ದಾರಿದೀಪದ ಬ್ಯಾಟರಿ ಕಳವು
ಕಾರ್ಕಳ, ಫೆ.18: ಕಾಂತಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲ್ಲಿ ಅಳವಡಿಸಲಾದ ಸೋಲಾರ್ ದಾರಿದೀಪದ ಬ್ಯಾಟರಿಗಳನ್ನು ಫೆ.18 ರಂದು ರಾತ್ರಿ ವೇಳೆ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕಾಂತಾವರ ಪ್ರೌಢಶಾಲೆ ಮುಂಭಾಗದ ಪುಂಚಾಡಿ ಪಡ್ಯೊಟ್ಟು ಬಸ್ ನಿಲ್ದಾಣದ ಬಳಿ, ಬೇಲಾಡಿ ಗುಡ್ಡೆಯಂಗಡಿ ಬಸ್ ನಿಲ್ದಾಣದ ಬಳಿ, ಬೇಲಾಡಿ ಬೈಲಂಗಡಿ ಕಿರು ನೀರು ಸರಬರಾಜು ಪಂಪ್ ಹೌಸ್ ಬಳಿ, ಬೇಲಾಡಿ ಗರಡಿ ಬಳಿ ಗ್ರಾಪಂ ವತಿಯಿಂದ ಅಳವಡಿಸಲಾದ ಒಟ್ಟು ಐದು ಸೋಲಾರ್ ದಾರಿ ದೀಪದ 5 ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಇದರ ಮೌಲ್ಯ 40,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪಿಡಿಓ ರಮೇಶ್ ನೀಡಿದ ದೂರಿ ನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





